‘ಬಿಳಿ ಜುಮಕಿ ಮತ್ತು ಹರಳುಗಳು’ ಲೇಖಕಿ ಸಿಂಧುಚಂದ್ರ ಹೆಗಡೆ ಅವರ ಲೇಖನ ಸಂಕಲನ. ಈ ಕೃತಿಗೆ ಕವಿ ಮತ್ತು ಕಥೆಗಾರ ರಾಜು ಹೆಗಡೆ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯಲ್ಲಿ ನಾಟಕ, ಸಂಗೀತ, ಸಿನಿಮಾ, ಸ್ತ್ರೀವಾದ, ಪ್ರವಾಸ ಇತ್ಯಾದಿ ಸಂಗತಿಗಳ ಕುರಿತಾದ ಲೇಖನಗಳಿವೆ. ಅವರ ‘ಲವ್ ಕಂ ಆರೇಂಜ್ಡ್ ಮದುವೆ’ ಕುರಿತೂ ಲೇಖನವಿದೆ. ಬರಹಗಳು ವಿಷಯ ವಸ್ತುವಿನ ದೃಷ್ಟಿಯಿಂದ ವೈವಿಧ್ಯಮಯವಾಗಿದೆ.
ಕವಯಿತ್ರಿ, ಕತೆಗಾರ್ತಿ ಸಿಂಧು ಚಂದ್ರ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯವರು. ತಂದೆ ಜಯರಾಮ ಹೆಗಡೆ, ತಾಯಿ ರೇವತಿ. ಬದುಕಿನ ಮೊದಲ ಹನ್ನೆರಡು ವರ್ಷಗಳನ್ನು ಹಾಸನದಲ್ಲಿ ಕಳೆದಿರುವ ಸಿಂಧು ಪದವಿಯವರೆಗೆ ಓದಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕೆ.ಡಿ.ಸಿ.ಸಿ ಬ್ಯಾಂಕ್ ಉದ್ಯೋಗಿ. ಬದುಕಿನ ಅನುಭವದಿಂದಲೇ ಸತ್ವಯುತ ಬರವಣಿಗೆಗೆ ಬುನಾದಿ ದಕ್ಕುತ್ತದೆ ಎಂದು ನಂಬಿರುವ ಅವರು 2010ರಲ್ಲಿ ತಮ್ಮ ಚೊಚ್ಚಲ ಕವನ ಸಂಕಲನ ‘ನಗುತ್ತೇನೆ ಮರೆಯಲ್ಲ’ ಪ್ರಕಟಿಸಿದರು. ಇದೀಗ ಕಣ್ಣಿಗೆ 'ಕನಸಿನ ಕಾಡಿಗೆಯನ್ನು ಹಚ್ಚಿಕೊಂಡು’, ‘ಹಗಲುರಾತ್ರಿಗಳನ್ನು' ವಿಭಿನ್ನ ದೃಷ್ಟಿಕೋನ ದಿಂದ ...
READ MORE