’ಭೂಮಿಗಾನ ಅಕಾಶಯಾನ’ ಪುಸ್ತಕದಲ್ಲಿ ಅವನೀಂದ್ರನಾಥ್ ರಾವ್ ಅವರ ರೇಡಿಯೋ ಬರೆಹಗಳಿವೆ. ಹಿರಿಯ ಲೇಖಕ ಆನಂದ ವಿ. ಪಾಟೀಲ ಅವರು ಈ ಪುಸ್ತಕದ ಬಗ್ಗೆ ’ಆಕಾಶವಾಣಿಗಾಗಿ ಸಿದ್ದ ಪಡಿಸಿದ ಮಾತು ಕತೆಯ ಕಟ್ಟು. ನನ್ನ ಸೇವೆಯೆಲ್ಲ ಆಕಾಶವಾಣಿಯಲ್ಲೇ ಕಳೆದು ನಿವೃತ್ತಿ ಅಂತ ಈಗ ಹೊರಗೆ ಬಂದಿರುವ ನನಗೆ ಮತ್ತೆ ರೇಡಿಯೋ ಸೆಟ್ಟನ್ನ ಪಕ್ಕದಲ್ಲಿರಿಸಿಕೊಂಡು ಆಲಿಸಿದ ಹಾಗಾಯಿತು. ಅದರಲ್ಲಿ ಅವನೀಂದ್ರ ಏನೇನೆಲ್ಲ ಮಾತನಾಡಿದ ಹಾಗೆ ಇಲ್ಲಿನ ಪುಟಗಳನ್ನ ತಿರುವುತ್ತ ಹೋದೆ. ನಮ್ಮನ್ನ ವಿಶ್ವದ ನಾನಾ ಕಡೆಗಳ ಅಚ್ಚರಿಗಳ ಕಡೆಗೆ, ದಿಗಿಲುಗಳ ಕಡೆಗೆ, ದಾರುಣಗಳ ಕಡೆಗೆ, ಸಾಹಸಗಳ ಕಡೆಗೆ, ಅಪರೂಪಗಳ ಕಡೆಗೆ ತೆರೆದುಕೊಳ್ಳುವಂತೆ ಒಂದಿಷ್ಟು ಕಾಲ ಹಿಡಿದಿಡುವ ಸಮಯಗಳು ಇಲ್ಲಿನವು. ಹೌದು, ವಿಶ್ವ ವಿಶಾಲ ವಿಶಾಲವಾಗಿದೆ, ನಮ್ಮಿಂದಾಚೆ ಅಲ್ಲಿ ಏನೇನೆಲ್ಲ ಇದೆ, ಸಂಭವಿಸುತ್ತಲೇ ಇದೆ ; ಅಂಥ ಕಿಂಚಿತ್ ಕಿಂಚಿತ್ತನ್ನ ಆಗೀಗ ಕಿವಿಗಳ ಮೇಲೆ ಹಾಕಿಕೊಳ್ಳುತ್ತ ಹೋಗುವುದು ನಮ್ಮನ್ನ ಈ ಅಪಾರ ಆವಾರಕ್ಕೆ ತೆರೆದುಕೊಳ್ಳುವಂತೆ, ವಿಸ್ತರಿಸಿಕೊಳ್ಳುವಂತೆ, ನಮ್ಮ ಸುತ್ತ ಕಿರಿದಾದ ಕೋಣೆ ಕಟ್ಟಿಕೊಳ್ಳದ ಹಾಗೆ ಜೀವಂತವಾಗಿರಿಸಲು ಖಂಡಿತ ಸಹಾಯ ಮಾಡುತ್ತದೆ ಅನಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ವೈ. ಅವನೀಂದ್ರನಾಥ್ ರಾವ್ (1971) ದೆಹಲಿಯ ಸಂಸ್ಕೃತಿ ಮಂತ್ರಾಲಯದ ಕೇಂದ್ರ ಸಚಿವಾಲಯ ಗ್ರಂಥಾಲಯದ ಅಧಿಕಾರಿ. ಉಡುಪಿ ಜಿಲ್ಲೆಯ ಎಲ್ಲೂರಿನವರು. ಉಚ್ಚಿಲದ ಸರಸ್ವತಿ ಮಂದಿರ, ಕುಂದಾಪುರದ ಬೋರ್ಡ್ ಹೈಸ್ಕೂಲ್ ಅಲ್ಲದೆ ಅದಮಾರು, ಪೊಲಿಪು, ಸುಳ್ಯದ ಸಬ್ಬಡ್ಕದಲ್ಲಿ ಆರಂಭಿಕ ಶಿಕ್ಷಣ ಪಡೆದರು. ಬ್ರಹ್ಮಾವರದ ಎಸ್.ಎಂ.ಎಸ್ ಮತ್ತು ಮುಲ್ಕಿಯ ವಿಜಯ ಕಾಲೇಜು ಮೂಲಕ ವಾಣಿಜ್ಯ ಪದವಿ ಪಡೆದರು. ಕ್ರಿಕೆಟಿಗನಾಗಿದ್ದ ಇವರು ವಿಶ್ವವಿದ್ಯಾಲಯದ 'ಬಿ.ಸಿ.ಆಳ್ವ ಟ್ರೋಫಿ' ಪಂದ್ಯಾವಳಿಯಲ್ಲಿ ಆಡಿದ್ದರು. ಕೆಲಸಮಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದೋಗಿಯಾಗಿದ್ದರು. ಉನ್ನತ ಶಿಕ್ಷಣದ ಬಳಿಕ ಮೂಡಬಿದರೆ, ಮುಲ್ಕಿ,ಮಂಗಳೂರಿನಲ್ಲಿ ಗ್ರಂಥಪಾಲಕರಾಗಿ ಮತ್ತು ಕೆಲಕಾಲ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದರು. ಮಂಗಳೂರು ...
READ MORE