ಭಯೋತ್ಪಾದನೆ ಮತ್ತು ಭಯೋತ್ಪಾದಕ ಬೆದರಿಕೆಗೆ ಪ್ರತಿರೋಧ ರಂಜಿತ್ ಕೆ ಪಚ್ನಂದ ಇಂಗ್ಲೀಷ್ ಮೂಲವಾಗಿದ್ದು ಗೊ.ರು.ಚನ್ನಬಸಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಯೋತ್ಪಾದನೆಯ ಇಲ್ಲಿನ ಮತ್ತು ಇನ್ನೂ ಅನೇಕ ಅಂಶಗಳ ಬಗೆಗೆ ರಂಜಿತ್ ಪಚ್ಚಂದ ಅವರು ತಮ್ಮ ಈ ಸ್ವೀಕೃತ ಮತ್ತು ವಿಸ್ಕೃತ ಪ್ರಕರಣಗ್ರಂಥದಲ್ಲಿ ಆಸಕ್ತಿಕರವಾದ ಮತ್ತು ಆಳವಾದ ಅಧ್ಯಯನ ನಡೆಸಿದ್ದಾರೆ. ಇದು ವಿಶ್ವವಿದ್ಯಾಲಯಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ, ಆಡಳಿತಗಾರರಿಗೆ, ಪೊಲೀಸ್ ಅಧಿಕಾರಿಗಳಿಗೆ, ಗುಪ್ತಚರ್ಯೆ ಅಧಿಕಾರಿಗಳಿಗೆ, ನೀತಿನಿರೂಪಕರಿಗೆ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ, ಸಾರ್ವಜನಿಕರಿಗೆ ಬಹಳಮಟ್ಟಿಗೆ ಉಪಯುಕ್ತವಾದ ಗ್ರಂಥವಾಗಿದೆ. ಲೇಖಕರು ವಿಷಯದ ಬಗೆಗೆ ಕ್ರಮಬದ್ಧವಾದ, ಸ್ಪಷ್ಟವಾದ ಮತ್ತು ವಿವರವಾದ ಚರ್ಚೆ ನಡೆಸಿದ್ದಾರೆ. ಎಂದು ದಿನೇಶ್ ವಾಜ ಪೊಲೀಸ್ ಮಹಾನಿರ್ದೇಶಕರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಈ ಕೃತಿಯ ವಿಷಯ ಸೂಚಿಯಲ್ಲಿ ಭಯೋತ್ಪಾದನೆಯ ಅರ್ಥವಿವರಣೆ, ಕಾರಣ ಮತ್ತು ಲಕ್ಷಣ, ಭಯೋತ್ಪಾದಕನ ವಿಶಿಷ್ಟ ಲಕ್ಷಣಗಳು ಭಯೋತ್ಪಾದಕನ ಮನಃಸ್ಥಿತಿ, ಭಯೋತ್ಪಾದನೆಯ ಬಗೆಗಳು, ಆತ್ಮಾಹುತಿ ಭಯೋತ್ಪಾದನೆ , ಅಮೆರಿಕಾ ಮೇಲಿನ ದಾಳಿ, ಭಯೋತ್ಪಾದನೆ ಮತ್ತು ಕಾನೂನು :ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ, ಭಾರತದಲ್ಲಿ ಭಯೋತ್ಪಾದನೆ , ಕೆಲವು ಭಯೋತ್ಪಾದಕ ತಂಡಗಳು : ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ, ಭಯೋತ್ಪಾದನೆ ಎದುರಿಸಲು ತಂತ್ರೋಪಾಯ , ರಾಷ್ಟ್ರೀಯ ನೀತಿ ಮತ್ತು ನಿರ್ವಹಣಾವಿಧಾನ, ಭಯೋತ್ಪಾದಕ ಬೆದರಿಕೆಗೆ ಪ್ರತಿರೋಧ :ಮಹಾವ್ಯೂಹ ಅಂಶಗಳನ್ನು ಒಳಗೊಂಡಿದೆ.
ಜಾನಪದ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗೊ. ರು. ಚನ್ನಬಸಪ್ಪರವರು ಚಿಕ್ಕಮಗಳೂರು ಜಿಲ್ಲೆಯ ಗೊಂಡೇದಹಳ್ಳಿಯಲ್ಲಿ ಜನಿಸಿದರು. ಗ್ರಾಮೀಣ ಬದುಕಿನ ಬಗ್ಗೆ ಮತ್ತು ಜಾನಪದ ಕ್ಷೇತ್ರವು ಅವರ ಆಸಕ್ತಿ ಕ್ಷೇತ್ರ. 1967ರಲ್ಲಿ ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಸಂದರ್ಭದಲ್ಲಿ ಹೊರತಂದ ಕೃತಿ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಗ್ರಂಥದ ಸಂಪಾದಕರು. ಕೆ.ಆರ್. ಲಿಂಗಪ್ಪ ಅಭಿನಂದನಾ ಸಮಿತಿ ಪ್ರಕಟಿಸಿದ ‘ಗ್ರಾಮಜ್ಯೋತಿ’ ಇವೆರಡೂ ಕೃತಿಗಳೂ ಗೊ. ರು. ಚನ್ನಬಸಪ್ಪಅವರು ಸಂಪಾದಿಸಿ ವಿಶಿಷ್ಟ ಆಕರಗ್ರಂಥಗಳು. ಜಾನಪದ ವಸ್ತುವನ್ನಾಧರಿಸಿ ಬರೆದ ’ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ‍್ಯಾವೋ’ ರಂಗಭೂಮಿಯ ಮೇಲೆ ಅಪೂರ್ವ ಯಶಸ್ಸು ಕಂಡ ...
READ MORE