ಲೇಖಕ ಕೆ.ಎಂ.ವಿಶ್ವನಾಥ ಮರತೂರ ಅವರ ಲೇಖನಗಳ ಸಂಗ್ರಹ ಕೃತಿ ʻಭರವಸೆಯ ಬೆಳಕು: ಅಜ್ಞಾನದ ಬೇರಿಗೆ ಅಕ್ಷರದ ತೈಲವೆರೆಯುತ್ತಿರುವ ಅಪರೂಪದ ವೃತ್ತಿ ಶಿಕ್ಷಕ". ಶಾಲೆ ಮತ್ತು ತರಗತಿ ಪ್ರಪಂಚದ ಒಳಹೊರಗನ್ನು ಇಲ್ಲಿನ ಲೇಖನಗಳು ತೆರೆದಿಡುತ್ತದೆ. ಲೇಖಕರು ಶಿಕ್ಷಣದ ಕ್ಷೇತ್ರದ ವಿವಿಧ ಕಡೆ ಕೆಲಸ ಮಾಡಿರುವ ಸಕಾರಾತ್ಮಕ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಹಾಗಾಗಿ ಒಟ್ಟು ಲೇಖನಗಳು ಶಿಕ್ಷಣ ಕ್ಷೇತ್ರದಲ್ಲಿನ ಬದುಕು, ಅದರಲ್ಲಿನ ಸಂತಸ, ಹತಾಷೆ, ಒತ್ತಡ, ವಿದ್ಯಾರ್ಧಿಗಳು, ಬದಲಾದ ಶಿಕ್ಷಣ ವ್ಯವಸ್ಥೆ ಮುಂತಾದ ವಿಚಾರಗಳ ಬಗ್ಗೆ ಚರ್ಚಿಸುತ್ತವೆ ಹಾಗೂ ಈ ವೃತ್ತಿಯಲ್ಲಿರುವವರಿಗೆ ದಾರಿದೀಪವಾಗಲಿರುವ ಮಾರ್ಗದರ್ಶಿಯಾಗಿದೆ.
ಲೇಖಕ ಕೆ.ಎಂ.ವಿಶ್ವನಾಥ ಮರತೂರ, ಕಲಬುರ್ಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಮರತೂರು ಗ್ರಾಮದವರು. ಕಲಬುರ್ಗಿಯಲ್ಲಿ ಎಂ.ಎಸ್.ಸಿ. ಬಿ.ಈಡಿ. ಪದವೀಧರರು. ಕುವೆಂಪು ಅವರ 109ನೇ ಜನ್ಮ ದಿನೋತ್ಸವದಂದು ಮೈಸೂರಿನಲ್ಲಿ ನಡೆದ ರಾಜ್ಯ ಕವನ ಸ್ಪರ್ಧೆಯಲ್ಲಿ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಪಡೆದವರು. 2015-16 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವತಿಯಿಂದ "ಜಾಗತೀಕರಣ & ದಲಿತರ ಸಂಕಷ್ಟಗಳು" ವಿಷಯದ ಮೇಲೆ ಫೆಲೋಶಿಪ್ (2015-16 ) ಪ್ರಬಂಧ ಹಾಗೂ ಇದೇ ಸಾಲಿನಲ್ಲಿ ವಿಶ್ವ ಅಕ್ಕ ಕನ್ನಡ ಸಮ್ಮೇಳನದ ಅಂತಾರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. “ಭಾರತದ ಭವಿಷ್ಯ ಮತ್ತು ಸಂವಿಧಾನ” ರಾಜ್ಯ ಪ್ರಬಂಧ ಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಸ್ಥಾನ ದೊರಕಿದೆ. ...
READ MORE