‘ಭಾರತೀಯ ಸೇನೆಯ ಹೇಳದಿರುವ ಕಥೆಗಳು’ ಕೃತಿಯು ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಅವರ ಮೂಲ ಕೃತಿಯಾಗಿದ್ದು, ಲೆಪ್ಟಿನೆಂಟ್ ಕಮಾಂಡರ್ ನವೀನಕುಮಾರ್ ಆರ್. ಕೊಳ್ಳಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯ ಲೇಖಕ ಹೇಳುವಂತೆ, ಇಲ್ಲಿನ ವಿಚಾರವು ಅವರ ಬದುಕಿನ ಕುರಿತಾಗಿದೆ. ಸೇನೆಯಲ್ಲಿದ್ದು ಬದುಕಲು ಕಲಿತ, ತರಬೇತಿ ಪಡೆದ, ತನ್ನ ಸೈನಿಕರನ್ನು ಕಾಳಗದಲ್ಲಿ ಮುನ್ನಡೆಸಿದ ಪ್ರತಿ ಸೇನಾಧಿಕಾರಿಯ ಕತೆ ಇಲ್ಲಿ ವ್ಯಕ್ತವಾಗಿದೆ. ಆತ ಏನೆಲ್ಲಾ ಕಲಿತಿರುತ್ತಾನೆ- ಅಮಾಯಕ ನಾಗರಿಕರಿಗೆ ಹಾನಿಯಾಗದಂತೆ ಕಾರ್ಯಾಚರಣೆಗಳನ್ನು ನಡೆಸುವುದು, ತನ್ನ ಸೈನಿಕರನ್ನು ದಿಟ್ಟತನದಿಂದ ಮುನ್ನಡೆಸುವುದು, ನಿರ್ದೇಶನಗಳ ಅನುಪಸ್ಥಿತಿಯಲ್ಲಿ ಸರಿಯಾದ ನಿರ್ಣಯಗಳನ್ನು ಕೈಗೊಳ್ಳುವುದು, ತನ್ನೊಳಗಿನ ಭಯವನ್ನು ಅವಿತಿಟ್ಟು ಭಾವನೆಗಳನ್ನು ನಿರ್ವಹಿಸುವುದು, ಹೀಗೆ ಹಲವಾರು ವಿಷಯಗಳ್ನು ಈ ಕೃತಿಯಲ್ಲಿ ನೀಡಲಾಗಿದೆ ಎನ್ನುತ್ತಾರೆ ಲೇಖಕ.
ಲೆಪ್ಟಿನೆಂಟ್ ಕಮಾಂಡರ್ ನವೀನ ಕುಮಾರ್ ಆರ್ ಕೊಳ್ಳಿ ಅವರು ನಿವೃತ್ತ ನೌಕಾಪಡೆ ಅಧಿಕಾರಿ. ‘ಶಾರ್ಟ್ ಸರ್ವಿಸ್ ಕಮಿಷನ್’ ಯೋಜನೆಯಡಿ ಹತ್ತು ವರ್ಷ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮೆಕ್ಯಾನಿಇಕಲ್ ಇಂಜಿನೀಯರಿಂಗ್ ಪದವೀಧರರಾದ ಅವರು ನೌಕಾಪಡೆಯಲ್ಲಿ ತರಬೇತಿ ಮತ್ತು ಹವಾಮಾನ ತಜ್ಞರಾಗಿದ್ದರು. ಶಿಕ್ಷಣ, ತರಬೇತಿ, ಮಾರ್ಗದರ್ಶನ, ನವೋದ್ಯಯ, ಸಾಹಿತ್ಯ ಮತ್ತು ನೈಸರ್ಗಿಕ ಕೃಷಿ ಅವರ ಆಸಕ್ತಿ ವಿಚಾರಗಳಾಗಿವೆ. ಕೃತಿಗಳು: ಭಾರತೀಯ ಸೇನೆಗಳು ಹೇಳದಿರುವ ಕಥೆಗಳು ...
READ MORE