ಲೇಖಕ ಪ್ರೇಮಶೇಖರ ಅವರ ಕೃತಿ ʻಬೆಂಗಳೂರು ಮಾಫಿಯಾʼ. ಪುಸ್ತಕವು ಸಾಹಿತ್ಯ ಲೋಕದಲ್ಲಿರುವ ಮಾಫಿಯಾದ ಬಗ್ಗೆ ಹೇಳುತ್ತದೆ. ಇಲ್ಲಿರುವ ಕಥಾ ವಸ್ತುವು ಸತ್ಯಕ್ಕೆ ಬಹಳ ಹತ್ತಿರವಾಗಿರುವ 8 ವರ್ಷಗಳ ಹಿಂದಿನ ಕತೆಯಾಗಿದೆ. ಓದುವಿಕೆಗೆ ಕೇವಲ ಪತ್ರಿಕಾ ಮಾಧ್ಯಮ ಮಾತ್ರ ಇದ್ದಾಗ ಕೆಲವೊಂದು ವಿಷಯಗಳು ಹೊರಲೋಕ ಕಾಣುತ್ತಿರಲಿಲ್ಲ. ಈ ಸಾಮಾಜಿಕ ಜಾಲತಾಣಗಳು ಬಂದಮೇಲೆ ಹಲವು ಬರಹಗಾರರು, ವಿಮರ್ಶಕರು, ಪ್ರಕಾಶಕರು ಬಣ್ಣ ಕಳೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಈ ಎಲ್ಲಾ ವಿಚಾರಗಳನ್ನು ಬಿಡಿಸಿ ತೋರಿಸಿದ್ದಾರೆ ಲೇಖಕರು. ಪುಸ್ತಕದ ಬಗ್ಗೆ ಪ್ರೇಮಶೇಖರ್ ಅವರು ಹೇಳುವಂತೆ, “ಇಲ್ಲಿ ಬುದ್ಧನ ಜ್ಞಾನೋದಯಕ್ಕೆ ಪ್ರೇರಣೆಯಾದವು ಎಂದು ಹೇಳಲಾಗುವ ಮೂರು ನೋಟಗಳನ್ನು ಇಲ್ಲಿ ರೂಪಕವಾಗಿ ಬಳಸಿಕೊಂಡಿದ್ದೇನೆ. ಅವಿಲ್ಲಿ ಜ್ಞಾನೋದಯ ಉಂಟುಮಾಡುವುದು ಕಥಾನಾಯಕನಿಗೋ, ನಿರೂಪಕನಿಗೋ ಅಥವಾ ತನಗೋ ಎನ್ನುವುದನ್ನು ಓದುಗನೇ ನಿರ್ಣಯಿಸಬೇಕು”.
ಹೊರನಾಡ ಕನ್ನಡಿಗ ಪ್ರೇಮಶೇಖರ ಪಠ್ಯವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಸಂಶೋಧನಾ ಲೇಖನಗಳನ್ನು ಹಾಗೂ ಕನ್ನಡದಲ್ಲಿ ಕಥೆಕಾದಂಬರಿಗಳನ್ನು ಬರೆಯುವುದರ ಮೂಲಕ ಬರವಣಿಗೆಯನ್ನಾರಂಭಿಸಿದವರು.. ಹುಟ್ಟಿದ್ದು 1960 ಜೂನ್ 22 ಕೊಳ್ಳೇಗಾಲದಲ್ಲಿ. ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿ, ಇಪ್ಪತ್ತೆರಡು ವರ್ಷಗಳ ಸುಧೀರ್ಘ ಕಾಲ ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಬೋಧಿಸಿ 2012ರಲ್ಲಿ ಸ್ವಯಂನಿವತಿ ಪಡೆದುಕೊಂಡಿದ್ದಾರೆ. ಪತ್ರಿಕಾರಂಗದಲ್ಲಿರುವ ಹಿತೈಷಿಗಳ ಬಯಕೆಯಂತೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಕನ್ನಡದಲ್ಲಿ ಐನೂರರಷ್ಟು ಲೇಖನಗಳನ್ನು ಬರೆದಿದ್ದಾರೆ. ಇದುವರೆಗೆ ಎರಡು ಕಾದಂಬರಿಗಳನ್ನೂ, ಹತ್ತು ಕಥಾ ಸಂಕಲನಗಳನ್ನೂ, ಹನ್ನೊಂದು ಲೇಖನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಕಥಾರಚನೆಯಲ್ಲಿ ತರಬೇತಿ ನೀಡುವ ಕಾರ್ಯಾಗಾರಗಳನ್ನು ...
READ MORE