ಬೆಂಬಿಡದ ಭೂತಗಳು

Author : ಶಿವಾನಂದ ಜೋಶಿ

Pages 256

₹ 170.00




Year of Publication: 2017
Published by: ಲೋಕಶಿಕ್ಷಣ ಟ್ರಸ್ಟ್ ಗ್ರಂಥಮಾಲೆ
Address: ಬೆಂಗಳೂರು-ಹುಬ್ಬಳ್ಳಿ

Synopsys

ಪಾ.ವೆಂ. ಆಚಾರ್ಯರ ಅಪ್ರಕಟಿತ ಬರೆಹಗಳ ಸಂಕಲನ ‘ಬೆಂಬಿಡದ ಭೂತಗಳು’ . ಲೇಖಕ-ಪತ್ರಕರ್ತ ಶಿವಾನಂದ ಜೋಶಿ ಸಂಪಾದಿಸಿದ್ದಾರೆ. ಭಾರತದ ಸ್ವಾತಂತ್ಯ್ರ ನಂತರ ದೇಶವು ಅನುಭವಿಸಿದ ಸಂಕಟಗಳ ಸರಮಾಲೆಯೇ ಈ ಕೃತಿ. ರಾಜಕೀಯ ಸೇರಿದಂತೆ ಎಲ್ಲ ವಲಯದ ವಿದ್ಯಮಾನಗಳು ಇವರ ಪ್ರಖರ ವೈಚಾರಿಕತೆಯಲ್ಲಿ ಮಿಂದಿವೆ.

ಸ್ವಾತಂತ್ಯ್ರ: ಅನಿವಾರ್ಯದ ಔದಾರ್ಯ, ಗಲಭೆಗಳು, ಪ್ರಜಾತಂತ್ರ ಹಾಗೂ ಅಧಿಕಾರದಾಹ, ಚಳವಳಿಗಳು ಮತ್ತು ದಬ್ಬಾಳಿಕೆ, ಗಡಿತಂಟೆ: ವಿವೇಕ ಮತ್ತು ಅವಿವೇಕ, ಭಾರತದ ನೆರೆ-ಹೊರೆ, ಜಾತಿಯತೆಯ ಪ್ರಶ್ನೆ: ಅರ್ಥ ಮತ್ತು ಅನರ್ಥ, ರಾಜಕಾರಣ ಒಂದು ವೃತ್ತಿಯಾಗಬೇಕು ಸೇರಿದಂತೆ ಒಟ್ಟು ವಿದ್ವತ್ ಪೂರ್ಣವಾದ 29 ಲೇಖನಗಳು ಜೊತೆಗೆ ತೇಲಿದ್ದೆಷ್ಟು ಈಸಿದ್ದೆಷ್ಟು (ಪಾ.ವೆಂ. ಆತ್ಮಾವಲೋಕನ) ಸಂಕಲನ ಒಳಗೊಂಡಿದೆ. 

About the Author

ಶಿವಾನಂದ ಜೋಶಿ
(29 October 1937 - 19 February 2015)

ಶಿವಾನಂದ ಜೋಶಿ ಮೂಲತಃ ಬಾಗಲಕೋಟೆ ಜಿಲ್ಲೆಯ ಕೆರೂರು ಗ್ರಾಮದವರು. (ಜನನ: 29-10-1937) ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಅವರು ಕ್ರೀಡಾಂಕಣಕ್ಕೆ ಬರೆಯುತ್ತಿದ್ದ ‘ಚಾರ್ ರನ್ ಕೆ. ಲಿಯೆ’ ಎಂಬ ಆಂಕಣ ಪ್ರಸಿದ್ಧಿ ಪಡೆದಿತ್ತು. ಇವರ ಕಾರ್ಯಕ್ಷೇತ್ರ ಮಾತ್ರ ಹುಬ್ಬಳ್ಳಿಯೇ ಆಗಿತ್ತು. ಪಾಪು-ಪಾವೆಂ: ಒಂದು ತೌಲನಿಕ ಅಧ್ಯಯನ, ಪತ್ರಿಕೋದ್ಯಮ ಒಂದು ಮಾರ್ಗದರ್ಶಿ, ಓಲಂಪಿಕ್ ಆಂದೋಲನ, ಕ್ರಿಕೆಟ್ ಕಥೆ, ವಿಜಯ ದುಂದುಭಿ, ಶಿರಡಿ ಸಾಯಿ ಸಚ್ಚರಿತ್ರೆ, ಸ್ತ್ರೀ ಚರಿತ್ರೆ, ಪುರುಷ ಭಾಗ್ಯ, ಇತಿಹಾಸದ ಹಾದಿಯಲ್ಲಿ ಸಾಧಕರ ಸಾಲು ಮುಂತಾದವು ಅವರ ಕೃತಿಗಳು.  ಪಾಟೀಲ ಪುಟ್ಟಪ್ಪನವರ ಒಡೆತನದಲ್ಲಿದ್ದ ವಿಶ್ವವಾಣಿ ಹಾಗೂ ಪ್ರಪಂಚ ಪತ್ರಿಕೆಗಳ ಮೂಲಕ ಪತ್ರಿಕಾ ...

READ MORE

Related Books