‘ಬತ್ತಳಿಕೆ’ ಹಿರಿಯ ಲೇಖಕಿ ಡಾ. ಕೆ. ಷರಿಫಾ ಅವರ ಲೇಖನಗಳ ಸಂಕಲನ. ಈ ಬತ್ತಳಿಕೆಯಲ್ಲಿ ಹಲವು ಬಾಣಗಳಿವೆ. ಈ ಒಂದೊಂದು ಬಾಣಕ್ಕೂ ವಿವಿಧ ಆಯಾಮಗಳಿವೆ. ಕಾರಣ ಈ ಬರಹಗಳು ನಾಲ್ಕು ಗೋಡೆಗಳ ನಡುವಿನ ಸಂವೇದನೆಗಳ ಮೂಲದ್ದಲ್ಲ. ಇದು ಸಾಹಿತ್ಯ ಬದುಕು, ಸಾಮಾಜಿಕ ಪ್ರಜ್ಞೆ, ರಾಜಕೀಯ ದೃಷ್ಟಿಕೋನ, ಹೋರಾಟ ಮುಂತಾದವುಗಳಿಂದ ಕೂಡಿದ್ದಾಗಿವೆ. ಇಂತಹ ಬರಹ ಅಕ್ಷರಕ್ಕಿರುವ ಜವಾಬ್ದಾರಿಯನ್ನು ನೆನಪಿಸುತ್ತದೆಯಲ್ಲದೆ ಇದರ ಹೆಸರಿನಲ್ಲಿ ಶತಮಾನಗಳಿಂದಲೂ ನಡೆದಿರುವ ಶೋಷಣೆಗಳನ್ನು ಬೆತ್ತಲುಗೊಳಿಸುತ್ತದೆ.
ಲೇಖಕಿ ಕೆ.ಷರೀಫಾ ಅವರು 1957 ಮೇ 05ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ಬಾಬುಮಿಯಾ, ತಾಯಿ ಪುತಲೀಬೇಗಂ. ಬಿಡುಗಡೆಯ ಕವಿತೆಗಳು, ನೂರೇನ್‌ಳ ಅಂತರಂಗ, ಪಾಂಚಾಲಿ, ಮುಮ್ರಾಜಳ ಮಹಲು, ಬುರ್ಖಾ ಪ್ಯಾರಡೈಸ್, ಸಂವೇದನೆ (ವಿಮರ್ಶೆ), ಮಹಿಳಾ ಮಾರ್ಗ (ಸಹ ಸಂಪಾದನೆ), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನೆ), ಹೊಸ ಶತಮಾನದ ಕಾವ್ಯ (ಸಂಪಾದನೆ) ಅವರ ಪ್ರಕಟಿತ ಕೃತಿಗಳು. ಅವರಿಗೆ ಮಹಿಳೆ ಮತ್ತು ಸಮಾಜ ಪ್ರಶಸ್ತಿ, ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಶ್ರೀ ಪ್ರಶಸ್ತಿ, 2019ನೇ ಸಾಲಿನ ಕ.ಸಾ.ಪದ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ ದೊರೆತಿದೆ. ...
READ MORE