ಡಾ. ಮಲ್ಲಿಕಾರ್ಜುನ ಕಮತಗಿ ಅವರು ರಚಿಸಿದ ‘ಬಟಾ ಬಯಲು’ ಕೃತಿಯು ಲೇಖನಗಳ ಸಂಕಲನವಾಗಿದೆ. ಕೊರೊನಾ ಕಾಲದ ತಲ್ಲಣಗಳು ಎನ್ನುವುದು ಲೇಖಕರು ಕೃತಿಗೆ ನೀಡಿರುವ ಉಪಶೀರ್ಷಿಕೆ. ಇಲ್ಲಿಯ ಲೇಖನಗಳು ಕಥೆಗಳಲ್ಲ, ಪ್ರಬಂಧಗಳಲ್ಲ. ಇವು ಕೊರೊನಾ ಕಾಲದಲ್ಲಾದ ತಲ್ಲಣಗಳು ಎಂಬುದು ಲೇಖಕರ ಅಭಿಪ್ರಾಯ. ಆದ್ದರಿಂದ, ಪ್ರತಿ ಲೇಖನವು ತಲ್ಲಣ-1, 2..ಹೀಗೆ ಅಧ್ಯಾಯಗಳು ರೂಪುಗೊಂಡಿವೆ. ಕೊರೊನಾ ವೈರಸ್ ಈ ಜಗತ್ತನ್ನು ಎಷ್ಟೊಂದು ಭೀತಿಗೊಳಪಡಿಸಿದೆ ಎಂಬುದರ ಚಿಂತನೆಗಳು ಇಲ್ಲಿವೆ. ಒಂದು ಘಟನೆಯ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ, ವಿಮರ್ಶಾತ್ಮಕವಾಗಿ ವಿವರಿಸಿ, ಅದರಿಂದ ಪಾರಾಗುವುದು ಹೇಗೆ ಎಂಬುದನ್ನೂ ಸೂಚಿಸುತ್ತಾರೆ. 1ರಿಂದ 13 ರವರೆಗಿನ ತಲ್ಲಣಗಳು ರೋಗದ ಭೀಕರತೆ ಜೊತೆಗೆ ಜನರ ವರ್ತನೆ, ಅವರ ಮಾನಸಿಕ ಸ್ಥಿತಿಯ ಚಿತ್ರಣ ನೀಡುತ್ತಾರೆ. ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿಯೂ ಬರಹಗಳು ಎಚ್ಚರಿಕೆಯನ್ನು ಕಾಯ್ದುಕೊಂಡಿವೆ.,
ಲೇಖಕ ಡಾ. ಮಲ್ಲಿಕಾರ್ಜುನ ಕಮತಗಿ ಅವರು ಮೂಲತಃ ಯಾದಗಿರಿ ಜಿಲ್ಲೆಯವರು. ತಂದೆ ಹೊಳೆಪ್ಪ, ತಾಯಿ ನೀಲಮ್ಮ. ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವೀಧರರು. ಕೃತಿಗಳು: ಬಟಾಬಯಲು (ಕೊರೊನಾ ಕಾಲದ ತಲ್ಲಣಗಳು) ...
READ MORE