ಬಸವ ಸಿರಿ

Author : ಮಲ್ಲಿಕಾರ್ಜುನ ವಡ್ಡನಕೇರಿ

Pages 194

₹ 250.00




Year of Publication: 2021
Published by: ವಿಶ್ವಗುರು ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಿತಿ
Address: ಡೋಂಗರಗಾಂವ್, ತಾ: ಕಮಲಾಪುರ, ಜಿಲ್ಲೆ: ಕಲಬುರಗಿ

Synopsys

ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅವರು ಸಂಪಾದಿಸಿದ ಕೃತಿ- "ಬಸವ ಸಿರಿ" . ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗಾರಗಾoವ್ ಗ್ರಾಮದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಂದರ್ಭದಲ್ಲಿ ಪ್ರಕಟಿತ ಸಂಪಾದನಾ ಕೃತಿ ಇದು. ಒಟ್ಟು 25 ವಿದ್ವಾಂಸರ ಲೇಖನಗಳಿವೆ. ಎಲ್ಲವೂ ವಚನಸಾಹಿತ್ಯ ಮತ್ತು ಶರಣ ಸಾಹಿತ್ಯಕ್ಕೆ ಸಂಬಂಧಿಸಿದವು. ವಚನ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಸನ, ಬಸವಣ್ಣನವರ ಸಾಮಾಜಿಕ ಚಿಂತನೆ, ವಚನ ಚಳವಳಿ, ಮಹಿಳಾ ಪ್ರತಿನಿಧೀಕರಣ,ಶರಣರು ಮತ್ತು ಸೂತಕಗಳು, ಶರಣರು ಮತ್ತು ಕಾಯಕ ತತ್ವ, ಶರಣರು ಎದುರಿಸಿದ ಸವಾಲುಗಳು, ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ಬಸವಣ್ಣನವರ ದೃಷ್ಟಿಯಲ್ಲಿ ದೇವರು ಮತ್ತು ಧರ್ಮ, ವಚನ ಸಾಹಿತ್ಯದಲ್ಲಿ ಮಹಿಳೆ, ವಚನಗಳು ಮತ್ತು ವಿಜ್ಞಾನ, ಬಸವಣ್ಣನವರು ಹಾಗೂ ಶರಣರ ಸಂಬಂಧ, ಶರಣರ ವಚನಗಳಲ್ಲಿ ಸಂಸಾರದ ನೆಲೆ-ಬೆಲೆ ಹೀಗೆ ಲೇಖನಗಳು ಒಳಗೊಂಡಿವೆ.

About the Author

ಮಲ್ಲಿಕಾರ್ಜುನ ವಡ್ಡನಕೇರಿ
(08 March 1969)

ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅವರು ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗಾರಗಾoವ್  ಗ್ರಾಮದವರು.  ತಂದೆ ಚಿದಂಬರರಾವ್ , ತಾಯಿ ಪಾರ್ವತಿ. ಗ್ರಂಥಾಲಯ ವಿಜ್ಞಾನ ವಿಷಯದಲ್ಲಿ  ಪಿಎಚ್. ಡಿ ಪದವೀಧರರು. ಪಿಡಿಎ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮುಖ್ಯ ಗ್ರಂಥಪಾಲಕರಾಗಿದ್ದಾರೆ. ಕೃತಿಗಳು: ಬಸವ ಸಿರಿ (ಸಂಪಾದನೆ) ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಉತ್ತಮ ಗ್ರಂಥಪಾಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ...

READ MORE

Related Books