‘ಬಣ್ಣದ ಲೋಕ’ ಡಾ. ಶರಣು ಹುಲ್ಲೂರು ಇವರ ಕೃತಿಯಾಗಿದೆ. ಇದು ಲೇಖಕರ ಪುಸ್ತಕದ ಬಗೆಗಿನ ಮಾತು; ಕಥೆ, ಕವಿತೆಗಳ ರೀತಿಯಲ್ಲೇ ಸಿನಿಮಾ ಬಗ್ಗೆ ಬರೆಯುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಬರವಣಿಗೆ ಶುರು ಮಾಡಿದ್ದು ಕವಿತೆ ಮೂಲಕವಾದರೂ, ಈ ವಿಷಯದ ಮೇಲೆ ಬರೆಯಲೇಬೇಕು ಅಂತ ಅನಿಸಿದ್ದು ಬಣ್ಣದ ಜಗತ್ತಿನ ಕುರಿತಾಗಿ. ಅದರಲ್ಲೂ ಪತ್ರಕರ್ತನಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದಾಗಿಂದ ಈ ತುಡಿತ ಮತ್ತಷ್ಟು ಹೆಚ್ಚಾಯಿತು. ಕಾರಣ, ಈ ಕ್ಷೇತ್ರದ ಕುರಿತು ಪುಸ್ತಕಗಳು ಕಡಿಮೆ. ಈ ಮಾತನ್ನು ಕೇವಲ ನಾನಷ್ಟೇ ಹೇಳುತ್ತಿಲ್ಲ, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡುತ್ತಿರುವ ಅದೆಷ್ಟೋ ವಿದ್ಯಾರ್ಥಿ ಸ್ನೇಹಿತರು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಸ್ವತಃ ನಾನೂ ಕೂಡ ಈ ಕೊರತೆಯನ್ನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಹೆಚ್ಚೆಚ್ಚು ಈ ಕ್ಷೇತ್ರದ ಕುರಿತಾಗಿಯೇ ಇತ್ತೀಚೆಗೆ ಪುಸ್ತಕಗಳನ್ನು ಬರೆಯುತ್ತಿರುವೆ. ಸಿನಿಮಾ ರಂಗದ ಕುರಿತಾಗಿಯೇ ಬರುತ್ತಿರುವ ಏಳನೇ ಪುಸ್ತಕವಿದು ಎಂದು ಹೇಳಿದ್ದಾರೆ.
ವೃತ್ತಿಯಿಂದ ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿರುವ ಅವರು ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು, ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು ರಚಿಸಿದ್ದಾರೆ. ತಕಧಿಮಿಕಾ, ಮುಂಗಾರಿನ ಕನಸು ಕಾರ್ತೀಕ ದೀಪ, ಬದುಕು, ಮದರಂಗಿ ಮುಂತಾದ ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ 'ಅತ್ಯುತ್ತಮ ...
READ MORE