ಬಂಜಾರಾ ಹೆಜ್ಜೆಗುರುತುಗಳು

Author : ಬಿ.ಟಿ. ಲಲಿತಾ ನಾಯಕ್

Pages 224

₹ 0.00




Year of Publication: 2009
Published by: ಒನ್ ವೀಲರ್
Address: ಸಂಜಯನಗರ ಬೆಂಗಳೂರು-560004
Phone: 9945177900

Synopsys

ʼಬಂಜಾರಾ ಹೆಜ್ಜೆಗುರುತುಗಳುʼ ಲೇಖಕಿ ಡಾ. ಬಿ. ಟಿ. ಲಲಿತಾನಾಯಕ್‌ ಅವರ ಲೇಖನಗಳ ಸಂಕಲನ.. ಧರ್ಮ ದೈವಗಳಿಗೆ ಅಂಟಿಕೊಂಡ ಜನ ಪ್ರಾಮಾಣಿಕತೆ ಮತ್ತು ನಂಬಿಕೆಗೆ ತಮ್ಮ ಪ್ರಾಣವನ್ನೂ ಒತ್ತೆ ಇಡಲು ಅಂಜದವರು ಎಂಬ ಸಾರಾಂಶದ ಜೊತೆಗೆ ಇಲ್ಲಿನ ಲೇಖನಗಳು ಸಾಗುತ್ತದೆ. ಬ್ರಿಟಿಷರ ವಿರುದ್ದ ಶ್ರೀರಂಗಪಟ್ಟಣದಲ್ಲಿ ಸಮರ ಸಾರಿದ್ದ ಟಿಪ್ಪು ಸುಲ್ತಾನ್‌ ತನ್ನ ನಂಬುಗೆಯ ಕೆಲವು ಬಂಜಾರರ ಕಟ್ಟಾಳುಗಳನ್ನು ನೇಮಿಸಿಕೊಂಡಿದ್ದರ ಬಗೆಗೆ ಈ ಕೃತಿಯಲ್ಲಿ ಹೇಳಲಾಗಿದೆ. ಈ ಬಂಜಾರರ ಉಡುಗೆ, ತೊಡುಗೆ, ಆಭರಣ ಜೊತೆಗೆ ಅವರ ಬುದ್ದಿಶಕ್ತಿ ಮತ್ತು ಬ್ರಿಟಿಷರು ಕೂಡ ನಾನಾ ರೀತಿಯಲ್ಲಿ ಅವರ ಉಪಯೋಗ ಪಡೆಯುತ್ತಿದ್ದುದರ ಬಗ್ಗೆಯೂ ಮಾಹಿತಿ ಇದೆ. 

About the Author

ಬಿ.ಟಿ. ಲಲಿತಾ ನಾಯಕ್
(04 April 1945)

ಬಿ.ಟಿ. ಲಲಿತಾ ನಾಯಕ್  ಜನಿಸಿದ್ದು 1945 ಏಪ್ರಿಲ್‌ 4 ರಂದು ಚಿಕ್ಕಮಗಳೂರಿನ ತಂಗಲಿ ತಾಂಡದಲ್ಲಿ. ಪತ್ರಿಕಾ ವರದಿಗಾರ್ತಿಯಾಗಿ ಅನುಭವ ಹೊಂದಿರುವ ಇವರು, ಸಕ್ರಿಯ ರಾಜಕಾರಣಿ, ಸಮಾಜಸೇವಕಿಯಾಗಿ ಜನರಿಗೆ ಪರಿಚಯವಾದವರು. ಕೆಲಕಾಲ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಇವರು ಕನ್ನಡಕ್ಕೆ ಸಾರಸತ್ವ ಲೋಕಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕವಿತೆ, ಕತೆ, ಕಾದಂಬರಿ ಹಾಗೂ ನಾಟಕ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುತ್ತಾರೆ. 1981 ರಲ್ಲಿ ಲಂಕೇಶ್ ಪತ್ರಿಕೆಗೆ ವರದಿಗಾರ್ತಿಯಾಗಿ 6 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಾರೆ.   ಕಾರ್ಯಕ್ಷೇತ್ರಗಳು : ಸೇವಾಲಾಲ್ ದಂತ ವೈದ್ಯಕೀಯ ಕಾಲೇಜಿನ ಕಾಲೇಜಿನ ಗೌರ್‍ನಿಂಗ್ ಕೌನ್ಸಿಲ್ ಕಾರ್ಯಧ್ಯಕ್ಷೆಯಾಗಿ ಸೇವೆ, ಕನ್ನಡ ಕುಲತಿಲಕ ಮಾಸಪತ್ರಿಕೆ ಗೌರವಾಧ್ಯಕ್ಷೆಯಾಗಿ ...

READ MORE

Related Books