ಲೇಖಕ ರಾಜು ಭಂಡಾರಿ ಅವರ ’ಬಂಗಾರ ತೀರದಲ್ಲಿ ಬೊಗಸೆ ನೀರು’ ಲೇಖನಗಳ ಸಂಗ್ರಹ. ಕೃತಿಗೆ ಮುನ್ನುಡಿ ಬರೆದ ಟಿ. ತಿಮ್ಮೇಶ್ ’ ಪ್ರಚಲಿತ ಆಗು-ಹೋಗುಗಳ ಬಗೆಗಿನ ಲೇಖನ, ರಂಗಕರ್ಮಿಗಳ ಸಂದರ್ಶನ, ಯುವ ಮನಗಳ ತಲ್ಲಣಗಳ ಕಥೆ.. ಹೀಗೆ ವಿವಿಧ ಪ್ರಾಕಾರಗಳಲ್ಲಿ ತಮ್ಮ ಅನುಭವ, ದೃಷ್ಟಿಕೋನಗಳನ್ನು ದಾಖಲಿಸಿರುವ ರಾಜು, ಈ ಕೃತಿಯಲ್ಲಿ ಸಮಕಾಲೀನ ವಿದ್ಯಮಾನಗಳನ್ನು ತಮ್ಮದೇ ಆದ ವಿಶ್ಲೇಷಣೆ, ವಿಡಂಬನೆಗಳೊಂದಿಗೆ, ಸಮಸ್ಯೆಗಳಿಗೆ ಪರಿಹಾರದ ದಾರಿಯನ್ನೂ ಹುಡುಕಲೆತ್ನಿಸಿದ್ದಾರೆ. ದೇಶಪ್ರೇಮ, ಭ್ರಷ್ಟಚಾರ, ರಾಜಕಾರಣಿಗಳ ನಿರ್ಲಜ್ಜೆ ಇವುಗಳ ಬಗ್ಗೆ ಓದಿಸಿಕೊಂಡು ಹೋಗುವ ಈ ಕೃತಿಯಲ್ಲಿ ಕಾವೇರಿ ಹೋರಾಟದಲ್ಲಿ ಹುತಾತ್ಮರಾದ ರೈತ ಗುರುಸ್ವಾಮಿ, ತೈಲ ಮಾಫಿಯಾಕ್ಕೆ ಬಲಿಯಾದ ಮಂಜುನಾಥ್, ಕಟ್ಟೆಪುರಾಣ ಮುಂತಾದ ಲೇಖನಗಳು ಗಮನ ಸೆಳೆಯುತ್ತವೆ.’ ಎಂದು ಪ್ರಶಂಸಿದ್ದಾರೆ.
ಲೇಖಕ ರಾಜು ಭಂಡಾರಿ ರಾಜಾವರ್ತ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಕಳೆದ 15 ವರ್ಷಗಳಿಂದ ರಂಗಭೂಮಿಯಲ್ಲಿ ನಟ, ನಿರ್ದೇಶಕ, ನಾಟಕ ರಚನಾಕಾರರಾಗಿ ಅನುಭವವಿದೆ. ಕೃತಿಗಳು: ಮನ್ವಂತರ,ಮಧಮರ್ತ್ಯ, ಅಗ್ನಿ ಮರ್ಧನ, ಬಂಗಾರ ತೀರದಲ್ಲಿ ಬೊಗಸೆ ನೀರು. ಇವರ ಮನ್ವಂತರ ಕೃತಿಗೆ ರಾಜ್ಯ ಅರಳು ಪುರಸ್ಕಾರ ಲಭಿಸಿದೆ. ...
READ MORE