ಬಹುರೂಪಿ ಕಥನ- ಡಾ. ಸುಜಾತಾ ಲಕ್ಷ್ಮೀಪುರ ಅವರು ಬರೆದ ಸಾಹಿತ್ಯಕ -ಸಾಂಸ್ಕೃತಿಕ- ವೈಚಾರಿಕ- ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಕೃತಿ. 25 ಲೇಖನಗಳನ್ನು ಒಳಗೊಂಡಿದೆ. ಇಲ್ಲಿಯ ಹಲವಾರು ಲೇಖನಗಳು ಹೊಸತು,ಲಂಕೇಶ್ ಪತ್ರಿಕೆ,ಸಂವಾದ,ಸಾಧನೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹೊಸದಾಗಿ ಬರೆದ ಸಂಶೋಧನೆ ಮತ್ತು ವಿಮರ್ಶಾ ಲೇಖನಗಳ ಜೊತೆ ಕೃತಿ ಪ್ರಕಟಿಸಲಾಗಿದೆ. ಡಾ.ಬೈರಮಂಗಲ ರಾಮೇಗೌಡ ಅವರು ಬೆನ್ನುಡಿ ಬರೆದು ‘ಸಂವೇದನಾಶಲ ನೋಟ, ಗ್ರಹಿಕೆ ಹಾಗೂ ಮಂಡನೆಯನ್ನು ಬಹುರೂಪಿ ಕಥನದ ಲೇಖನಗಳು ಒಳಗೊಂಡಿವೆ’ ಎಂದು ಪ್ರಶಂಸಿಸಿದ್ದಾರೆ.
ಡಾ. ಸುಜಾತ ಲಕ್ಷ್ಮೀಪುರ ಕನ್ನಡ ಸ್ನಾತಕೋತ್ತರ ಪದವಿಯನ್ನು ಎರಡು ಚಿನ್ನದ ಪದಕ, ತೃತೀಯ ರ್ಯಾಂಕ್ ನೊಂದಿಗೆ ಪಡೆದಿದ್ದಾರೆ. ಹದಿನೈದು ವರ್ಷಗಳಿಂದ ಕನ್ನಡ ಭಾಷಾ ಬೋಧನೆಯಲ್ಲಿ ತೊಡಗಿಕೊಂಡಿರುವ ಅವರು ಅಧ್ಯಯನ ಮತ್ತು ಬರವಣಿಗೆಗಳನ್ನು ತಮ್ಮ ನೆಚ್ಚಿನ ಹವ್ಯಾಸಗಳನ್ನಾಗಿಸಿಕೊಂಡಿದ್ದಾರೆ. ಅವರ ಹಲವಾರು ಕವಿತೆಗಳು. ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವಾರು ವಿಚಾರ ಸಂಕೀರ್ಣಗಳಲ್ಲಿ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಉಪನ್ಯಾಸ, ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿಷಯ ಮಂಡನೆ, ಕವಿಗೋಷ್ಠಿಗಳಲ್ಲಿ ಕವಿತಾ ವಾಚನ. ನಿರೂಪಣೆ, ಹೀಗೆ ಹಲವಾರು ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಹಳೆಗನ್ನಡ ಸಾಹಿತ್ಯದ ಅಧ್ಯಯನ ಶಿಬಿರ, ಸರ್ಟಿಫಿಕೇಟ್ ಆಧಾರಿತ ...
READ MORE