ಬಹುಪರಾಕಿನ ಸಂತೆಯೊಳಗೆ

Author : ಎಚ್. ಲಕ್ಷ್ಮೀನಾರಾಯಣಸ್ವಾಮಿ

Pages 132

₹ 100.00




Year of Publication: 2015
Published by: ಸಿವಿಜಿ ಬುಕ್ಸ್
Address: ನಂ-277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು-560058

Synopsys

ಬಹುಪರಾಕಿನ ಸಂತೆಯೊಳಗೆ- ಎಚ್. ಲಕ್ಷ್ಮೀನಾರಾಯಣಸ್ವಾಮಿ ಅವರ ಲೇಖನಗಳ ಸಂಕಲನ. ಪ್ರತಿಭಾವಂತ ಕವಿಯಾಗಿ, ತಾರುಣ್ಯಾವಸ್ಥೆಯ ಹಸಿಬಿಸಿಯಲ್ಲಿರುವಾಗಲೇ ಖಂಡಕಾವ್ಯ ಸಾಹಸಕ್ಕೆ ಕೈಹಚ್ಚಿ ತನ್ನದೇ ಜಾಡನ್ನು ನಿರ್ಮಿಸಿಕೊಳ್ಳುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿ, ಬೆರಗು ಮೂಡಿಸಿರುವ ಕವಿ ಲಕ್ಷ್ಮೀನಾರಾಯಣಸ್ವಾಮಿ. ಪ್ರಸ್ತುತ ಕಾವ್ಯ ಸಂದರ್ಭದಲ್ಲಿ ಬೆಚ್ಚನೆಯ ಅನುಭವಗಳ ಕುತೂಹಲ ಹುಟ್ಟಿಸಿರುವ ಅವರು ಲೇಖನ ಸೃಷ್ಟಿಯಲ್ಲೂ ಅಷ್ಟೇ ಗಂಭೀರವಾಗಿ, ಸಮರ್ಥವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಕೃತಿಯಲ್ಲಿರುವ ಹದಿನಾರು ಲೇಖನಗಳು ಪುರಾವೆಯೊದಗಿಸುವಂತಿವೆ. ಈ ಲೇಖನಗಳು ಪತ್ರಿಕೆಗಳಿಗೆ, ನಿಯತಕಾಲಿಕ ಸಂಚಿಕೆಗಳಿಗೆ, ವಿಚಾರಗೋಷ್ಟಿ ಸಂಕಿರಣಗಳಲ್ಲಿ ಮಂಡಿಸುವುದಕ್ಕೆ ಸಿದ್ಧಪಡಿಸಿದವುಗಳು. ಕವಿಯೊಬ್ಬ ವಿಮರ್ಶಕನೂ ಆದಾಗ ಒಳ್ಳೆಯ ಕವಿತೆಗಳೂ ಸೃಷ್ಟಿಯಾಗಬಲ್ಲವು, ವಿಮರ್ಶೆಗೆ ಆಹ್ಲಾದಕಾರಿಯಾದ ಕಾವ್ಯಗುಣವೂ ಪ್ರಾಪ್ತವಾಗಬಲ್ಲದು. ನಿಜವಾದ ವಿಮರ್ಶಕನಿಗೆ ಜಾತಿಯಿಂದ, ಮತದಿಂದ, ಪಂಥದಿಂದ, ವರ್ಗದಿಂದ ಸಿಡಿದು ಸಮತೋಲನದಲ್ಲಿ ಮಾತನಾಡುವ ಪ್ರಜ್ಞೆ ವಿವೇಕಗಳು ಬೇಕು. ಆ ವಿವೇಕ ಗುಣ ಲಕ್ಷ್ಮೀನಾರಾಯಣ ಅವರಿಗೆ ಸಿದ್ಧಿಸಿದೆ ಎನ್ನಬಹುದು. ಇಲ್ಲಿನ ಬರಹಗಳನ್ನು ಗಮನಿಸಿದಾಗ ಸಾಹಿತ್ಯದ ಗಂಭೀರ ವಿದ್ಯಾರ್ಥಿಯೊಬ್ಬ ತಾನು ಅಧ್ಯಯನ ಮಾಡಿದ ಸಾಹಿತ್ಯ ಕೃತಿಗಳೊಂದಿಗೆ ತಾನು ನಡೆಸಿದ ಗಂಭೀರ ಅಧ್ಯಯನ ಹಾಗೂ ಅನುಸಂಧಾನಗಳಿಂದ ಉದ್ಭವಿಸಿದ ಹಲವು ಮಹತ್ತರ ಪ್ರಶ್ನೆಗಳು ಹಾಗೂ ಆ ಪ್ರಶ್ನೆಗಳಿಗೆ ತಾನು ಉತ್ತರವನ್ನು ಕಂಡುಕೊಳ್ಳುವ ಸಂಕ್ರಮಣ ಕಾಲಘಟ್ಟದಲ್ಲಿ ಉದ್ಭವಿಸಿದ ಉತ್ತರಗಳ ರೀತಿಯಲ್ಲಿದೆ. 

About the Author

ಎಚ್. ಲಕ್ಷ್ಮೀನಾರಾಯಣಸ್ವಾಮಿ

ಲೇಖಕ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರು (1987) ಬೆಂಗಳೂರಿನವರು. ಬೆಂಗಳೂರು ವಿ.ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯ, ಅದೇ ಕೇಂದ್ರದಲ್ಲಿ ಹಿರಿಯ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.  ಕೃತಿಗಳು: ಗೆಳತಿ ಮತ್ತೊಮ್ಮೆ ಯೋಚಿಸು, ಮುಟ್ಟಿನ ನೆತ್ತರಲ್ಲಿ’, ಉರಿವ ಕೆಂಡದ ಸೆರಗು (ಕವನ ಸಂಕಲನಗಳು), ಜಾಲಿಮರದ ಜೋಳಿಗೆಯಲ್ಲಿ ಎಂಬ ಖಂಡಕಾವ್ಯ ಕೃತಿ, ಇವರ ‘ತೊಗಲ ಚೀಲದ ಕರ್ಣ’ ಕೃತಿಗೆ 2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ.ತೊಗಲ ಚೀಲದ ಕರ್ಣ, ಸಾಣೆಗಲ್ಲು, ಬಹುಪರಾಕಿನ ಸಂತೆಯೊಳಗೆ (ವಿಮರ್ಶಾ ಕೃತಿ) ಡಾ. ಎಸ್ ಎನ್ ಲಕ್ಷ್ಮೀನಾರಾಯಣ ಭಟ್ಟರ ಕುರಿತ ಕಿರು ಹೊತ್ತಿಗೆ ಪ್ರಕಟಿಸಿದ್ದಾರೆ. ಬೆಂಗಳೂರು ಸಾರಿಗೆ ಸಂಸ್ಥೆ ನೀಡುವ ...

READ MORE

Related Books