‘ಬಿ.ವಿ ಕೆದಿಲಾಯರ ಆಖ್ಯ್ದ ವೈಚಾರಿಕ ಲೇಖನಗಳು’ ವಿ. ಗಣೇಶ್ ಅವರ ಸಂಪಾದಿತ ಕೃತಿಯಾಗಿದೆ. ನನ್ನ ಎಲ್ಲಾ ಲೇಖನಗಳನ್ನೂ ಓದಿ, ವಿಮರ್ಶಾತ್ಮಕ ದೃಷ್ಟಿಯಿಂದ ಪರಿಶೀಲಿಸಿ, ಆರಿಸಿ, ಪುನರ್ಮುದ್ರಣ ಮಾಡಬೇಕೆಂದು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು, ಈ ಪ್ರಕಟಣೆಗೆ ಕಾರಣರಾದವರು ಗಣ್ಯ ವಿದ್ವಾಂಸರೂ, ಉತ್ತಮ ಲೇಖಕರೂ ಆಗಿರುವ ಪ್ರೊ. ವಿ. ಗಣೇಶ, ಸಾಗರ ಅವರು. ಅವರ ವಿದ್ವತ್ತು, ಸಾಹಿತ್ಯ ಪ್ರತಿಭೆ, ಸರಳತೆ, ಸಜ್ಜನಿಕೆ, ಹೃದಯ ವೈಶಾಲ್ಯ, ಉದಾರ ಮನಸ್ಸು, ಅನ್ಯರ ಕೃತಿಗಳ ಬಗ್ಗೆ ಆಸಕ್ತಿ ಮುಂತಾದ ಗುಣಗಳು ನನ್ನನ್ನು ಗಾಢವಾಗಿ ಪ್ರಭಾವಿಸಿವೆ. ಹೃದಯ ವೈಶಾಲ್ಯ ನನ್ನ 85 ವರ್ಷಗಳ ಅನುಭವದಲ್ಲಿ ತೀರಾ ವಿರಳ ಎಂದು ಬಿ.ವಿ.ಕೆದಿಲಾಯ ಅವರು ಕೃತಿಯ ಬೆನ್ನುಡಿಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...
READ MORE