‘ಅನಿಸಿದ್ದು ಆಡಿದ್ದು’ ಲೇಖಕ ವಿಜಯಕಾಂತ ಪಾಟೀಲ ಅವರ ಸಮ್ಮಿಶ್ರ ಬರಹಗಳ ಸಂಕಲನ. ಇಲ್ಲಿ 41 ಲೇಖನಗಳಿವೆ. ಬರಹಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ವ್ಯಕ್ತಿಚಿತ್ರ, ಸಂದರ್ಶನ, ಪುಸ್ತಕಾವಲೋಕನ, ಸಮಾಕಾಲೀನ ಲೇಖನ- ಭಾಷಣಗಳು ಮತ್ತು ಸಮಕಾಲೀನ ವಿವಾದ, ತಲ್ಲಣಗಳ ಕುರಿತ ಕನ್ನಡದ ಪ್ರಮುಖ ಲೇಖಕರೊಂದಿನ ಸಂವಾದವೂ ಒಟ್ಟುಗೂಡಿವೆ. ಅನಿಸಿದ್ದು ಆಡಿದ್ದು ನೋಡಿದ್ದು ಕೇಳಿದ್ದು ಎಲ್ಲವೂ ಇಲ್ಲಿ ಯಥಾವತ್ತಾಗಿ ಜೀವಪರತೆಯ ವಕ್ತಾರಿಕೆ ಮಾಡಿದ್ದನ್ನು ಕಾಣಬಹುದು. ಮೂಲತಃ ಕವಿಯಾಗಿರುವ ಲೇಖಕರು ಗದ್ಯದಲ್ಲೂ ಪರಿಣಾಮಕಾರಿ ಲೇಖನಗಳನ್ನು ಬರೆದಿದ್ದಾರೆ.
ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್ಎಲ್ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...
READ MORE