ಅನಿಸಿದ್ದು ಅನುಭವಿಸಿದ್ದು

Author : ಗಂಗಾವತಿ ಪ್ರಾಣೇಶ್

Pages 107

₹ 68.00




Year of Publication: 2015
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಲೇಖಕ ಹಾಗೂ ನಗೆಗಾರ ಗಂಗಾವತಿ ಬಿ. ಪ್ರಾಣೇಶ್ ಅವರ ಕೃತಿ-ಅನಿಸಿದ್ದು ಅನುಭವಿಸಿದ್ದು. ತಮ್ಮ ಓದು, ಅನುಭವದ ಹಿನ್ನೆಲೆಯಲ್ಲಿ ಕಂಡುಂಡ ವಿಚಾರಗಳನ್ನು ಬರೆಹ ರೂಪಕ್ಕಿಳಿಸಿದ್ದೇ ಈ ಕೃತಿ. ಇಲ್ಲಿಯ ಲೇಖನಗಳಲ್ಲಿ ಹಾಸ್ಯವಿದೆ. ಆ ಮೂಲಕ ಜೀವನ ಸಂದೇಶವಿದೆ. ಅನುಭವದ ಗಟ್ಟಿತನವಿದೆ.

About the Author

ಗಂಗಾವತಿ ಪ್ರಾಣೇಶ್
(08 September 1961)

ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯಲಬುರ್ಗಿಯಲ್ಲೂ, ಬಿ.ಕಾಂ. ಪದವಿಯನ್ನು ಗಂಗಾವತಿಯಲ್ಲೂ ಪೂರೈಸಿದರು. ಪ್ರಾಣೇಶ್ ಅವರ ತಂದೆ ಸ್ವಾತಂತ್ರ್ಯ ಯೋಧ  ಬಿ.ವೆಂಕೋಬಾಚಾರ್ಯರು, ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿ ಬಾಯಿ. ತಾಯಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡವರು.  ಹಾಸ್ಯಕ್ಕಷ್ಟೇ ಸೀಮಿತವಾದ ಪ್ರಾಣೇಶ್ ನಗಿಸುವವನ ನೋವುಗಳು, ನಗ್ತಾ ನಲಿ ಅಳ್ತಾ ಕಲಿ, ಪಂಚ್‌ ಪಕ್ವಾನ್ನ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ. ಯೂ ಟ್ಯೂಬ್ ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ. ...

READ MORE

Related Books