ಮನೆಯೆ ಮೊದಲ ಪಾಠ ಶಾಲೆಯಾಗುವುದು ಅಮ್ಮನಿಂದ. ಅವಳು ಮೊದಲ ಶಿಕ್ಷಕಿ ಮಾತ್ರವಲ್ಲ ಪೋಷಕಿ, ಸ್ನೇಹಿತೆ, ಸ್ಪೂರ್ತಿ. ಇಂತಹ ಅಮ್ಮಂದಿರೊಂದಿಗಿನ ನವಿರು ಭಾವ ಹಾಗೂ ತಮ್ಮ ಸಂವೇದನೆಯನ್ನು ಇಮ್ಮಡಿಸುವಂತೆ ಮಾಡಿದ, ಅಕ್ಕರೆಯನ್ನು ಬಿತ್ತಿದ ಅಕ್ಕ-ಅಜ್ಜಿಯರನ್ನು ನೆನೆದು 23 ಲೇಖಕಿಯರು ತಮ್ಮ ಅನುಭವವನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ಎಸ್. ವಿ. ಸುಜಾತಾ ಅವರು ಕೃತಿಯ ಸಂಪಾದಕರು.
ಮಕ್ಕಳ ಸಾಹಿತಿ, ಅನುವಾದಕಿ ಸುಜಾತಾ ಎಸ್.ವಿ ಅವರು ಮೂಲತಃ ನಂಜನಗೂಡಿನವರು. ಪುಟ್ಟಿಗೊಂಬೆ ಕವನ ಸಂಕಲನ. ಮಕ್ಕಳ ನಮನ ಎಂಬ ಧ್ವನಿಸುರುಳಿ ಹೊರತಂದಿದ್ದಾರೆ. ಗಣನಿ ಆರ್ಯಿಕಾ ಜ್ಞಾನಮತಿ ಮಾತಾಜಿ (ಹಿಂದಿ), ಅನಂತನಾಥ ಪುರಾಣ (ಪ್ರಾಕೃತದಿಂದ), ಗಾಂಧೀಜಿಯವರ ಬರಹಗಳು (ಇಂಗ್ಲಿಷಿನಿಂದ), ಅಮೆರಿಕಾದಲ್ಲಿ ಜಿನಧರ್ಮ (ಇಂಗ್ಲಿಷಿನಿಂದ), ಪದಕೋಶ ಮುಂತಾದ ಕೃತಿಗಳನ್ನು ಅನುವಾದಿಸಿದ್ದಾರೆ. ’ಗಣಕ ಪದ ವಿವರಣಾ ಕೋಶ, ಹನ್ನೆರಡು ಕಥಾ ರತ್ನಗಳು, ಧವಳ (ನಿಯತಕಾಲಿಕ) ಮಾಧವಿ, ಶ್ರೇಯೋಭದ ಸುಮಾ ವಸಂತ’ ಅವರ ಸಂಪಾದಿತ ಕೃತಿಗಳು.ಅವರ ಸಾಹಿತ್ಯ ಸೇವೆಗೆ ’ಶ್ರೀ ಗೋಮ್ಮಟೇಶ್ವರ ವಿದ್ಯಾಪೀಠ ರಾಷ್ಟ್ರೀಯ ಪ್ರಶಸ್ತಿ’ ದೊರೆತಿದೆ. ...
READ MORE