‘ಅಮ್ಮ ಬರೆದ ಎರಡು ಪತ್ರಗಳು’ ಸ್ವಾಲಿಹ್ ತೋಡಾರ್ ಅವರ ಕೃತಿ. ಈ ಕೃತಿ ಜೀವನ ಪ್ರೇಮದ ವಿವಿಧ ಆಯಾಮಗಳನ್ನು ಪರಿಚಯಿಸುವ ಯತ್ನ ಮಾಡುತ್ತದೆ. ಅಳುವ ಮನುಷ್ಯನಿಗೆ ಅಳುವುದು ತಪ್ಪೇನು ಅಲ್ಲ, ಆದರೆ, ಅಳುತ್ತಲೇ ಕೂರಬೇಡಾ ಎಂದು ಕಿವಿಮಾತು ಉಸುರುತ್ತದೆ. ಸಾಧಕನಿಗೆ ಸಾಧನೆಯೇ ಶಿಖರ ಏರುವಾಲಗೂ ನಿನ್ನ ಕಾಲ ಕೆಳಗೆ ಉಳಿಯುವವರನ್ನು ತುಳಿಯಬೇಡ ಎಂದು ಬುದ್ಧಿವಾದ ಬೋಧಿಸುತ್ತದೆ. ಅಮ್ಮನನ್ನು ನಿರ್ಲಕ್ಷಿಸುವ ಮಗನಿಗೆ ಮಮತೆ ವಾರಿಧಿಯಾದ ತಾಯಿಯೊಬ್ಬಳನ್ನು ನಿರ್ಲಕ್ಷಿಸಿ, ಕೊನೆಗೆ ಪಶ್ಚಾತಾಪ ಪಟ್ಟ ಕಥೆ ಹೇಳುತ್ತದೆ. ಶಿಕ್ಷಕ-ಶಿಕ್ಷಕಿಯರಿಗೆ ವಿದ್ಯಾರ್ಥಿಗಳ ಜೊತೆ ಬೆರೆಯುವುದು ಹೇಗೆಂದು ಹೇಳಿಕೊಡುತ್ತದೆ. ವಿದ್ಯಾರ್ಥಿಗಳಿಂದ ಪರೀಕ್ಷೆಯ ಭಯವನ್ನು ನೀಗಿಸಲು ಯತ್ನಿಸುತ್ತದೆ. ಅಲ್ಲದೆ, ಪರಿಸರ, ಯುದ್ಧ, ಮಲಗಲು ಒಂದು ಕೋಣೆಯೂ ಇಲ್ಲದ ನತದೃಷ್ಟರ ಕುರಿತು ಅಂತಃಕರಣ ತುಂಬಿದ ಮಾತುಗಳನ್ನಾಡುತ್ತದೆ.
ಲೇಖಕ ಸ್ವಾಲಿಹ್ ತೋಡಾರ್ ಮೂಲತಃ ದಕ್ಷಿಣ ಕನ್ನಡದ ಮೂಡಬಿದ್ರೆ ಸಮೀಪದ ತೋಡಾರ್ ನವರು. ವೃತ್ತಿಯಿಂದ ಪತ್ರಕರ್ತರಾಗಿರುವ ಅವರು ಪ್ರವೃತ್ತಿಯಿಂದ ಬರಹಗಾರರಾಗಿದ್ದಾರೆ. ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಬಿಬಿಎಂ ಪದವಿ, ಮಂಗಳೂರು ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿರುವ ಅವರು ಕಳೆದ ಆರು ವರ್ಷಗಳಿಂದ ಗಲ್ಫ್ ಇಶಾರ ಮಾಸಿಕದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು: ಅಜ್ಞಾತ ಭಾರತ, ಅಮ್ಮ ಬರೆದ ಎರಡು ಪತ್ರಗಳು, ಮುಸ್ಲಿಮ್ ಸ್ವಾತಂತ್ರ್ಯ ಹೋರಾಟಗಾರರು, ಮಾರ್ಟಿನ್ ಲಿಂಗ್ಸ್ ಮುಹಮ್ಮದ್ ...
READ MORE