ಅಮರಶ್ರೀ ಅಪ್ಪು

Author : ಸಿ.ಆರ್. ವಿನಯ್ ರಾಮೇಗೌಡ

₹ 250.00




Year of Publication: 2022
Published by: ಕನ್ನಡ ಜನಶಕ್ತಿ ಕೇಂದ್ರ
Address: #4172, ‘ನೇಗಿಲಯೋಗಿ’ 2ನೇ ‘ಬಿ’ ಮುಖ್ಯ ರಸ್ತೆ, 1ನೇ ಹಂತ`, ಗಿರಿನಗರ, ಬೆಂಗಳೂರು-560058.

Synopsys

‘ಅಮರಶ್ರೀ ಅಪ್ಪು’ ಕೃತಿಯು ವಿನಯ್ ರಾಮೇಗೌಡ ಅವರ ಪುನೀತ್ ರಾಜಕುಮಾರ್ ಸ್ಮರಣೆ ಕುರಿತ ಸಂಪಾದಿತ ಲೇಖನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಎಲ್. ಶಿವಶಂಕರ್ ಅವರು, ಪುನೀತ್ ರಾಜಕುಮಾರ್ ಶ್ರೀಮಂತರ ಮನೆಯಲ್ಲಿ ಜನಿಸಿದರೂ, ಯಾವತ್ತು ತಾನು ಶ್ರೀಮಂತನೆಂದು ಅಹಂ ಪಟ್ಟವರಲ್ಲ, ಬಾಲ್ಯದಲ್ಲೇ ಚಿತ್ರರಂಗ ಪ್ರವೇಶ ಮಾಡಿದ ಪುನೀತ್ ತಮ್ಮ ತಂದೆಯವರ ಜೊತೆ ಜೊತೆಯಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸುತ್ತಾ ತಂದೆಯವರನ್ನೇ ಗುರು ಎಂದೇ ಸ್ವೀಕರಿಸಿ ತಂದೆಯವರ ಸರಳತೆ, ಸಜ್ಜನಿಕೆ, ನಡೆ-ನುಡಿ, ಎಲ್ಲವನ್ನೂ ಮೈಗೂಡಿಸಿಕೊಂಡ ಪುನೀತ್ ಅವರು ನಾಯಕ ನಟರಾಗಿ ಕನ್ನಡ ಚಿತ್ರರಂಗದ ಕೀರ್ತಿಯನ್ನು ಬೆಳಗಿದವರು. ತಮ್ಮ ದುಡಿಮೆಯ ಹಣದಲ್ಲಿ ಒಂದಿಷ್ಟನ್ನು ಸಮಾಜಕ್ಕಾಗಿಯೇ ಮೀಸಲಾಗಿಟ್ಟಿದ್ದರು. ಪುನೀತ್ ನಿಧನ ನಂತರ ದಿನ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತಂದಿರುವ ವಿನಯ್ ರಾಮೇಗೌಡ ಪುನೀತ್ ಅವರಿಗೆ ‘ಅಕ್ಷರ ನಮನ’ ಗಳನ್ನು ಸಲ್ಲಿಸಿರುವುದು ಶ್ಲಾಘನೀಯವಾಗಿದೆ ಎಂದಿದ್ದಾರೆ.

About the Author

ಸಿ.ಆರ್. ವಿನಯ್ ರಾಮೇಗೌಡ

ಸಿ.ಆರ್. ವಿನಯ್ ರಾಮೇಗೌಡ ಅವರು ಕನ್ನಡ ಜನಶಕ್ತಿ ಕೇಂದ್ರದ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. ಬರವಣಿಗೆ ಅವರ ಹವ್ಯಾಸ. ಕೃತಿಗಳು : ಅಮರಶ್ರೀ ಅಪ್ಪು ...

READ MORE

Related Books