‘ಆಗಾಗ ಬಿದ್ದ ಮಳೆ’ ಕೃತಿಯು ವಿಶ್ವೇಶ್ವರ ಭಟ್ ಅವರ ಬಿಡಿಬರಹಗಳಾಗಿವೆ. ಇಲ್ಲಿನ ಬರಹಗಳೆಲ್ಲ ‘ವಿಜಯಕರ್ನಾಕ ಪತ್ರಿಕೆಯಲ್ಲಿ ಬಿಡಿಬಿಡಿಯಾಗಿ ಪ್ರಕಟವಾದವುಗಳು. ಭಟ್ಟರ ಆಕರ್ಷಕ ಭಾಷಾಶೈಲಿ, ವಿಚಾರ ಮಂಥನವನ್ನು ಈ ಬರಹಗಳಲ್ಲಿ ಕಾಣಬಹುದು. ಕೃತಿಗೆ ಬೆನ್ನುಡಿ ಬರೆದಿರುವ ಭಾಮಿನಿಭಾನು ಕಾಮಿನಿ ಕಾಸರಗೋಡು ಅವರು, ವಿಶ್ವೇಶ್ವರ ಭಟ್ ಅವರ ಬರಹಗಳು ಬದುಕಿಗೆ ತುಂಬಾ ಹತ್ತಿರವಾಗುತ್ತದೆ. ಆದರಿಂದ ಅವರು ತುಂಬಾ ಇಷ್ಟವಾಗುತ್ತಾರೆ. ನನ್ನ ಸಂಗ್ರಹದಲ್ಲಿ ಅವರ ಎಲ್ಲ ಬರಹಗಳಿವೆ ಎಂದಿದ್ದಾರೆ. ನನಗೆ ಓದುವ ಹುಚ್ಚು ಹತ್ತಿಸಿದ್ದೇ ಅವರ ಬರಹಗಳು. ಅವರ ಜೀವನಪ್ರೀತಿ, ಕಾಳಜಿ ನನಗೆ ತುಂಬಾ ಇಷ್ವವಾಗುತ್ತದೆ ಎಂದಿದ್ದಾರೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE