ಆತ್ಮಕಥೆಗಳಲ್ಲಿ ಕರ್ನಾಟಕ ಕಥೆ

Author : ಬಿ.ಎಂ. ಪುಟ್ಟಯ್ಯ

Pages 100

₹ 40.00




Year of Publication: 1999
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ-583276

Synopsys

‘ಆತ್ಮಕಥೆಗಳಲ್ಲಿ ಕರ್ನಾಟಕ ಕಥೆ’ ಲೇಖಕ ಬಿ.ಎಂ. ಪುಟ್ಟಯ್ಯ ಅವರ ಸಂಶೋಧನಾತ್ಮಕ ಕೃತಿ. ಆತ್ಮಕಥೆಗಳಲ್ಲಿ ಏನನ್ನು ಬರೆದಿದ್ದಾರೆ. ಯಾವ ಕಾರಣಕ್ಕಾಗಿ ಬರೆದಿದ್ದಾರೆ, ಕಥೆಯ ವಸ್ತುವಿನ ಕುರಿತಾದ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಪ್ರಶ್ನೆಗಳೇ ಈ ಕೃತಿಯಲ್ಲಿy ಚರ್ಚೆಯನ್ನು ಪ್ರಚೋದಿಸಿವೆ ಮತ್ತು ಪ್ರಭಾವಿಸಿವೆ. ಅಧ್ಯಯನಕ್ಕೆ ವಿಭಿನ್ನ ಆಯಾಮಗಳನ್ನು ನೀಡಿವೆ.

ಈ ಶತಮಾನದ ಉದ್ದಕ್ಕೂ ಕರ್ನಾಟಕದ ಬೇರೆ ಬೇರೆ ವರ್ಗದ ಸಮುದಾಯ ಅನುಭವಿಸಿರುವ ಬಡತನ, ಎದುರಿಸಿರುವ ಜಾತಿಯ ಸಮಸ್ಯೆ, ಕರ್ನಾಟಕದ ಬೇರೆ ಭಾಗಗಳಲ್ಲಿ ಅಸಮಾನವಾಗಿ ಹರಡಿದ್ದ ಸ್ವಾತಂತ್ರ್ಯ ಚಳವಳಿ ಇವೇ ಮುಂತಾದ ವಿಷಯಗಳ ಬಗೆ ವಿಭಿನ್ನ ರೂಪದ ಚಿತ್ರಣಗಳಿವೆ. ಈ ಚಿತ್ರಣಗಳಲ್ಲಿ ಸಮಕಾಲೀನ ಒತ್ತಡಗಳು. ಸಾಂಸ್ಕೃತಿಕವಾದ ಅತಿ ಮಹತ್ವದ ಕುತೂಹಲಗಳು ಮತ್ತು ವಿಶಿಷ್ಟತೆಗಳು ಅಡಗಿವೆ.

ಹಾಗಾಗಿ ಒಟ್ಟಂದದಲ್ಲಿ ಇವನ್ನು ಒಂದೆಡೆ ಸೇರಿಸಿ, ಸಂಕ್ಷಿಪ್ತಗೊಳಿಸಿ ಕರ್ನಾಟಕದ ಕಥೆ ಎಂದೂ ಕರೆಯ ಬಹುದು ಎನ್ನುತ್ತಾರೆ ಲೇಖಕ ಬಿ.ಎಂ.ಪುಟ್ಟಯ್ಯ. ಆತ್ಮಕಥೆಗಳಲ್ಲಿ ಕರ್ನಾಟದ ಕುರಿತ ವಸ್ತು ವಿಷಯ, ಅಧ್ಯಯನವನ್ನು ನಡೆಸುವ ಮೂಲಕ ಈ ಮಹತ್ವದ ಕೃತಿಯನ್ನು ರಚಿಸಿದ್ದಾರೆ.

About the Author

ಬಿ.ಎಂ. ಪುಟ್ಟಯ್ಯ
(01 June 1967)

ಡಾ.ಬಿ. ಎಂ. ಪುಟ್ಟಯ್ಯ ಅವರು ಎಂ.ಎ ಕನ್ನಡ ಪದವಿಯಲ್ಲಿ  ಪ್ರಥಮ ರ್‍ಯಾಂಕ್ ಪಡೆದು ಅಲಕ್ಷಿತ ವಚನಕಾರರ ಲೋಕದೃಷ್ಟಿ ಎಂಬ ವಿಷಯದ ಮೇಲೆ  ಎಂ. ಫಿಲ್ ಪದವಿ ಪಡೆದರು. ಕನ್ನಡ ದಲಿತ ಸಾಹಿತ್ಯ ಮತ್ತು ಪ್ರತಿ ಸಂಸ್ಕ್ರತಿ ಎಂಬ ವಿಷಯದ ಮೇಲೆ ಪಿಎಚ್.ಡಿ ಪದವಿಯನ್ನು 1998 ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ  ಪಡೆದರು. ಪ್ರಸ್ತುತ ಕನ್ನಡ ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ವಿಮರ್ಶೆ, ಸಾಹಿತ್ಯ ಸಂಶೋಧನೆ, ಸಂಸ್ಕ್ರತಿ ಅಧ್ಯಯನ, ಶಿಕ್ಷಣ ಆರ್ಥಿಕತೆ ಹಾಗೂ ರಾಜಕೀಯ ಅಧ್ಯಯನಗಳು, ಹೋರಾಟ ಚಳುವಳಿ ಹಾಗೂ ...

READ MORE

Related Books