ಆಸರೆಯಾದವರು-ಲೇಖನಗಳ ಸಂಗ್ರಹ ಕೃತಿಯನ್ನು ಲೇಖಕ ಲಿಂಗಾರೆಡ್ಡಿ ಶೇರಿ ಹಾಗೂ ಬಿ.ಆರ್. ಅಣ್ಣಾಸಾಗರ ಅವರು ಸಂಪಾದಿಸಿದ್ದಾರೆ. 16 ಮಹಾನ್ ಸಾಧಕರ ಹಾಗೂ 16 ಲೇಖಕರು ಬರೆದ ವ್ಯಕ್ತಿ ಚಿತ್ರ ಬರಹಗಳಿವೆ. ಸತ್ಯಾರ್ಥಿ, ಸಾವಿತ್ರಿ ಬಾಯಿ ಫುಲೆ, ಬಾಬು ಜಗಜೀವನರಾಂ, ಶೋಭಿರಾಮ, ಮೇಡಂ ಕಾಮಾ, ಪ್ರೀತಿ ಲತಾ, ಗೋವಿಂದ ವಲ್ಲಭ ಪಂತ್, ಛತ್ರಪತಿ ಶಾಹು ಮಹಾರಾಜ, ಶರಣಯ್ಯ ವಸ್ತ್ರದ, ಅಬ್ದುಲ್ ಕಲಾಂ ಇವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಲೇಖನಗಳಲ್ಲಿ ಸ್ಮರಿಸಲಾಗಿದೆ ಉಪನ್ಯಾಸಕ ಜಗದೀಶ ಕಡಬಗಾಂವ ಬೆನ್ನುಡಿ ಬರೆದು ‘ವಿದ್ಯಾರ್ಥಿ ಗಳಿಗೆ ಉಪಯುಕ್ತ ಮಾಹಿತಿ ಒದಗಿಸುವ ಲೇಖನಗಳು’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಲಿಂಗಾರೆಡ್ಡಿ ಸೇರಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು. ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...
READ MORE