ತೀರ್ಥಹಳ್ಳಿಯ ಆಗುಂಬೆ ಅಂದ ತಕ್ಷಣ ಬಹುತೇಕರಿಗೆ ನೆನಪಾಗುವುದು ಎಡೆಬಿಡದೆ ಸುರಿವ ಜೋರು ಮಳೆ, ಹಾಡುವ-ಹಾರುವ ಹಕ್ಕಿಗಳು, ಹಚ್ಚ ಹಸಿರು ಮಾತ್ರ. ಆದರೆ ಅಲ್ಲಿಯೇ ಬದುಕು ಸಾಗಿಸುತ್ತಿರುವವರು ಆಸ್ಪತ್ರೆಗೆಂದು ಮಣಿಪಾಲಿಗೆ ಸಾಗುವ ರಸ್ತೆಯಲ್ಲಿ ಜೀವವನ್ನು ಅಂಗೈಯಲ್ಲಿಟ್ಟು ಹೋಗುವುದರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ‘ಆ ಹಾದಿ’ಯಲ್ಲಿ ಸಾಗುವಾಗಿನ ಜನರ ತಲ್ಲಣ, ಕತೆ-ವ್ಯಥೆ, ಸಂಕಷ್ಟಗಳಿಗೆ ಅಕ್ಷರ ರೂಪ ಕೊಟ್ಟಿದ್ದಾರೆ ಲೇಖಕ ಸದಾಶಿವ ಸೊರಟೂರು. ಒಟ್ಟು ಎಂಟು ಲೇಖನಗಳನ್ನು ಒಳಗೊಂಡ ಈ ಪುಟ್ಟ ಪುಸ್ತಕ ಒಂದು ತೀರ್ಥಹಳ್ಳಿಯ ರಸ್ತೆಯ ಕತೆಗಳನ್ನು ತೆರೆದಿಡುತ್ತದೆ.
ಸದಾಶಿವ ಸೊರಟೂರು ಇವರು ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿ ನಗರದಲ್ಲಿ ವಾಸ. ಪ್ರೌಢಶಾಲಾ ಶಿಕ್ಷಕರಾಗಿರುವ ಇವರು ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇಲ್ಲಿ ಕರ್ತವ್ಯದಲ್ಲಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರು ಪರಿಸರ ಪ್ರಜ್ಞೆ, ಸಾಮಾಜಿಕ ಕಾಳಜಿ ಮತ್ತು ಮನುಷ್ಯ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ವಿಷಯಗಳ ಕಡೆ ಲೇಖನಿ ಓಡಿಸಿದ್ದಾರೆ. ಬರೆದ ಯಾವುದೊ ಒಂದು ಸಾಲು ಓದುವ ಯಾರದೊ ಎದೆಯೊಳಗೆ ಅರಿವಿನ ಒಂದಾದರೂ ಕಿಡಿ ಹೊತ್ತಿಸಲಿ ಎಂದು ಕಾದಿದ್ದಾರೆ. ಕಥೆ ಇವರ ಇಷ್ಟದ ...
READ MORE