ಲೇಖಕ ಡಿ.ಎಸ್. ನಾಗಭೂಷಣ ಅವರ ಲೇಖನಗಳ ಸಂಕಲನ ಕೃತಿ ʻಆ ಗಣರಾಜ್ಯ ಈ ಕರ್ನಾಟಕʼ. ಇಲ್ಲಿರುವ ಲೇಖನಗಳು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಯ ಸಾಧನೆಗಳನ್ನು ಪರಾಮರ್ಶಿಸುತ್ತವೆ. ಭಾರತವೆಂಬ ಗಣರಾಜ್ಯದಲ್ಲಿ ಕರ್ನಾಟಕವೆ೦ಬ ರಾಜ್ಯ ಮೂಡಿದ ಸಾಂಸ್ಕತಿಕ ಹಾಗೂ ರಾಜಕೀಯ ಹಿನ್ನಲೆೆ, ಕರ್ನಾಟಕ ರಾಜ್ಯೋದಯದ ಕನಸಿನ ಹಿಂದಿದ್ದ ಮತ್ತು ಅದಕ್ಕಾಗಿ ನಡೆಸಿದ ಹೋರಾಟದಲ್ಲಿ ಹಾಸುಹೊಕ್ಕಾಗಿದ್ದ ಗುರಿ-ಆಶಯಗಳು ಎಷ್ಟರ ಮಟ್ಟಿಗೆ ಈಡೇರಿವೆ, ಭವಿಷ್ಯದ ಹಾದಿ ಏನು ಎತ್ತ ಎ೦ಬ ವಿಷಯಗಳ ಬಗ್ಗೆ ಇಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ.
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...
READ MORE'ಸುವರ್ಣ ಕರ್ನಾಟಕ' ಸಂದರ್ಭದ ಹಿನ್ನೆಲೆಯಲ್ಲಿ 'ವಿಕ್ರಾಂತ ಕರ್ನಾಟಕ' ವಾರಪತ್ರಿಕೆಗಾಗಿ ಡಿ.ಎಸ್. ನಾಗಭೂಷಣರವರು ಆಯೋಜಿಸಿದ ವಿಶೇಷ ಲೇಖನ ಮಾಲೆಯ ಸಂಗ್ರಹವಿದು. ಇದರಲ್ಲಿ, ಸುವರ್ಣ ಕರ್ನಾಟಕದ ಸುವರ್ಣ ಪುಟಗಳಲ್ಲಿ ಹೆಸರಿಸಲೇಬೇಕಾದ ಸಾಹಿತ್ಯದ ವಿವಿಧ ವಲಯಗಳ ಹತ್ತು ಅತ್ಯುತ್ತಮ ಫಲವಂತಿಕೆಗಳನ್ನು, ಅಂದರೆ, ಹತ್ತು ಭಾವಗೀತೆಗಳು, ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಸಂಶೋಧಕರು, ಕ್ರೀಡಾಪಟುಗಳು, ರಾಜಕಾರಣಿಗಳು - ಹೀಗೆ ತಾರ್ಕಿಕ ವಿಶ್ಲೇಷಣೆ ಯನ್ನೊಳಗೊಂಡ ಹದಿನಾಲ್ಕು ಲೇಖನಗಳನ್ನು ಆಯಾ ಕ್ಷೇತ್ರಗಳ ಪರಿಣತರಿಂದ ಬರೆಸಿ ದಾಖಲಿಸಲಾಗಿದೆ. 'ಆ ಗಣರಾಜ್ಯ - ಈ ಕರ್ನಾಟಕ' ಮತ್ತು 'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು : ಒಂದು ಮುನ್ನೋಟ' ಎಂಬ ಲೇಖನಗಳು 'ಕರ್ನಾಟಕತ್ವ' ಕುರಿತ ಪ್ರಗತಿಪರವಾದ ಸೂಕ್ಷ್ಮ ವಿಚಾರಗಳಿಂದ ಕೂಡಿವೆ. ಕನ್ನಡದ ಶ್ರೇಷ್ಠ ಪ್ರತಿಭೆಗಳನ್ನು ಒಂದೆಡೆ ದಾಖಲಿಸುವಲ್ಲಿ ಈ ಕೃತಿಯ ಪ್ರಯತ್ನ ಶ್ಲಾಘನೀಯವಾದದ್ದು.
ಪುಸ್ತಕ ಪರಿಚಯ- ಕೃಪೆ: ಹೊಸತು