ಚಿಗುರು ಚಿತ್ತಾರ ಕೆ. ಆರ್ ಸ್ವಾಮಿ ನೆನಪಿನ ಕಥನವಾಗಿದೆ. ಸಿಹಿ ನೆನಪುಗಳೇ ಹಾಗೆ, ಅದರಲ್ಲೂ ಮರುಕಳಿಸಲಾಗದ ಗತದ ಬಗ್ಗೆ ಹಳಹಳಿಕೆ ಇಲ್ಲದೆ ಸಹಜ ಜೀವನ ಪ್ರೀತಿಯಿಂದ ದಾಖಲಿಸಿದಾಗ ಅದು ಸದ್ಯಕ್ಕೂ ಕನ್ನಡಿಯಾಗಬಲ್ಲದು. ಕೆ.ಆರ್. ಸ್ವಾಮಿಯವರ ಈ ಲೇಖನ ಮಾಲೆಗೆ ಆ ಗುಣ ದಕ್ಕಿದೆ. ಅವರ ಲೇಖನ ಕೃಷಿಗೆ ಎಂತಹ ಉತ್ಕಟ ಕ್ಷಣದಲ್ಲೂ, ಎಂಥ ದುರಿತ ಸಂದರ್ಭದಲ್ಲೂ ಒಳಸುಳಿಗಳಲ್ಲೆಲ್ಲೋ ಪ್ರಕಟವಾಗುವ ಬದುಕಲ್ಲಿನ ಅನುಭೋಗವನ್ನು ಸೆರೆ ಹಿಡಿಯುವ ಶಕ್ತಿ ಇದೆ. ಹಾಗಾಗಿ ಕೇವಲ ವಿಷಾದವಾಗಬಹುದಾಗಿದ್ದ ಮೂವರು ಅಜ್ಜಿಯಂದಿರ (ಬದುಕೆಂದರೆ ಹೀಗೆ) ಕಥೆಗೆ ಒಂದು ಅನುಭೂತಿ ಪ್ರಾಪ್ತವಾಗುತ್ತದೆ. ಕಲಂದರ್, ಸಿಕಂದರ್ ಅವರ ಕಥೆ (ಸಾವು ಗೆದ್ದವರು) ವ್ಯಂಗ್ಯ ಕಥಾನಕವಾಗಷ್ಟೇ ಆಗುಳಿಯದೇ ಬದುಕಿನ ವೈರುದ್ಧಗಳತ್ತ ನೋಟ ಬೀರುತ್ತದೆ. ಶಂಕರ್ಸ್ ವೀಕ್ತಿಯ ತಂಕರ್, ಆರ್.ಕೆ.ಲಕ್ಷ್ಮಣ್ ವ್ಯಂಗ್ಯ ಚಿತ್ರಶೈಲಿಯ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ತಾವೇ ಖ್ಯಾತ ವ್ಯಂಗ್ಯ ಚಿತ್ರಕಾರರಾಗಿದ್ದು, ವ್ಯಂಗ್ಯ ಚಿತ್ರವನ್ನೇ ಕಲಾಭಿವ್ಯಕ್ತಿ ಮಾಡಿಕೊಂಡ ಕೆ.ಆರ್.ಸ್ವಾಮಿಯವರ ಬರಹ ಸಮುಚ್ಚಯದಲ್ಲೂ ವ್ಯಂಗ್ಯ ಚಿತ್ರಕಲೆಯ ವೈಶಿಷ್ಟ್ಯವಾದ ಲಘುವಿನಲ್ಲಿ ಗುರು ಕಾಣುವ ಗುರುವಿನಲ್ಲಿ ತಾ ಕಾಣುವ ಪರಿಯನ್ನು ಗಮನಿಸಬಹುದು.
ಕೆ.ಆರ್ .ಸ್ವಾಮಿ ಅವರು ವ್ಯಂಗ್ಯಚಿತ್ರಕಾರನಾಗಿದ್ದು ವಿದ್ಯುತ್ ಇಂಜಿನಿಯರ್ ಆಗಿ ಕೆಲಸನಿರ್ವಹಿಸಿದ್ದಾರೆ. ಹಾಗೂ ಅನೇಕ ಪತ್ರಿಕೆಗಳಲ್ಲಿ ಅವರ ವ್ಯಂಗ್ಯ ಚಿತ್ರಗಳು ಪ್ರಕಟವಾಗಿದೆ. ಕೆ. ಆರ್ ಸ್ವಾಮಿ ನೆನಪಿನ ಕಥನ: ಚಿಗುರು ಚಿತ್ತಾರ. ...
READ MORE