‘ಸಂಕ್ರಮಣ’ ವಿದ್ಯಾಧರ ಮುತಾಲಿಕ ದೇಸಾಯಿ ಅವರ ಕಥಾಸಂಕಲನವಾಗಿದೆ. ಅಸಹಾಯಕರಾದ ಅವರನ್ನು ನಾವೆಲ್ಲ ಹುಚ್ಚರೆಂದೋ ಕಳ್ಳ ಹರಾಮಿಗಳೆಂದೋ ಹೆಸರಿಟ್ಟು ಕರೆದು ನಮ್ಮ ಸಣ್ಣತನವನ್ನು ತೋರುತ್ತ ಅಲಕ್ಷ್ಯದಿಂದಿರುತ್ತೇವೆ. ಇದೋ ಇಲ್ಲಿವೆ, ಅವರ ಬಾಳಿನ ಆಳಕ್ಕಿಳಿದು ಅವರ ಈ ಸ್ಥಿತಿಗೆ ಕನ್ನಡಿ ಹಿಡಿದಂತೆ ತೋರುವ ನಾವೇ ಕಾರಣವಾಗಿರುವ ಒಂದಷ್ಟು ಕಥೆಗಳು .
ಸಾಹಿತಿ ವಿದ್ಯಾಧರ ಮುತಾಲಿಕ ದೇಸಾಯಿ ಅವರು ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಕೊಡಗನ ಕೋಳಿ ನುಂಗಿತ್ತಾ, ಸಂಕ್ರಮಣ, ಹೊಸಗಣ್ಣಿನ ಒಳನೋಟ, ದೊಳಗಿಂದ, ಚಕ್ರ, ಸಂಜೀವಿನಿ, ನಕ್ಷತ್ರಗಳು, ತೇರನ್ನೇರಿದ ಚೆನ್ನಿ, ದಾಸಾಮೃತವಾಣಿ ಒಳನೋಟ, ಉಡಿಯ ತುಂಬುವೆ, ದಾರ್ಶನಿಕ, ಮಹಾತಾಯಿ, ಹೊಳೆವ ಮುತ್ತಿನ ಹನಿಗಳು, ಮಹಾತಾಯಿ, ನುಡಿಸಿರಿ, ವೈವಿಧ್ಯ, ಹಿಮ್ಮುಖ ಹರಿದ ನದಿ ಸೇರಿ ಹಲವಾರು ಕೃತಿಗಳೂ ರಚಿಸಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು, ಗೊರೂರು ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ ಸೇರಿದಂತೆ ಸಂದಿವೆ. ...
READ MOREಹೊಸತು- 2004-ಫೆಬ್ರವರಿ
ನಮ್ಮ ಸುತ್ತಲೂ ದೀನರು- ದರಿದ್ರರು-ನಿರ್ಗತಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಸಹಾಯಕರಾದ ಅವರನ್ನು ನಾವೆಲ್ಲ ಹುಚ್ಚರೆಂದೋ ಕಳ್ಳ ಹರಾಮಿಗಳೆಂದೋ ಹೆಸರಿಟ್ಟು ಕರೆದು ನಮ್ಮ ಸಣ್ಣತನವನ್ನು ತೋರುತ್ತ ಅಲಕ್ಷ್ಯದಿಂದಿರುತ್ತೇವೆ. ಇದೋ ಇಲ್ಲಿವೆ, ಅವರ ಬಾಳಿನ ಆಳಕ್ಕಿಳಿದು ಅವರ ಈ ಸ್ಥಿತಿಗೆ ಕನ್ನಡಿ ಹಿಡಿದಂತೆ ತೋರುವ ನಾವೇ ಕಾರಣವಾಗಿರುವ ಒಂದಷ್ಟು ಕಥೆಗಳು ! “ಉದರನಿಮಿತ್ತಂ ಬಹುಕೃತ ವೇಷ'' ಎಂಬಂತೆ ಹಾಳು ಹೊಟ್ಟೆಗಾಗಿ ಇದನ್ನೆಲ್ಲ ಮಾಡುವುದಾಗಿ ಹೇಳಿಕೊಳ್ಳುವ ಕಥಾ ಪಾತ್ರಗಳು ನಮ್ಮ ಮನಸ್ಸನ್ನು ಹಿಂಡಬಲ್ಲವು.