ದೇವ್ರು ಬರ್‍ತಾನೆ ದಾರಿಬಿಡಿ

Author : ವೈ.ಎಸ್. ಹರಗಿ

Pages 118

₹ 60.00




Published by: ಶ್ರೀನಿವಾಸ ಪುಸ್ತಕ ಪ್ರಕಾಶನ
Address: ಉತ್ತರ ಕನ್ನಡ ಜಿಲ್ಲೆ

Synopsys

‘ದೇವ್ರು ಬರ್‍ತಾನೆ ದಾರಿ ಬಿಡಿ’ ಕೃತಿಯು ವೈ.ಎಸ್. ಹರಗಿ ಅವರ ಕಥಾಸಂಕಲನವಾಗಿದೆ.ಕೃತಿಗೆ ಬೆನ್ನುಡಿ ಬರೆದಿರುವ ಸಿ. ಉಪೇಂದ್ರ ಸೋಮಯಾಜಿ ಅವರು, ‘ದ.ರಾ. ಬೇಂದ್ರೆ ಕಾವ್ಯ ಪುರಸ್ಕಾರ ಗಳಿಸಿದ ಕವನ ಸಂಕಲನ `ಕನಸು ಮಾರುವ ಹುಡುಗಿ’ ಕಥಾಸಂಕಲನಗಳಾದ `ಮೂಕ ಹಕ್ಕಿ ನಕ್ಕಾಗ’, `ಬಾರಪ್ಪಾ ಬಾರೋ ಮಳೆರಾಯ’ ಹಾಗೂ ಕಾದಂಬರಿ `ಸಪ್ನ ಗೆಜ್ಜೆ’ ಗಳ ಮೂಲಕ ಈಗಾಗಲೇ ಸಾರಸ್ವತ ಲೋಕದಲ್ಲಿ ಯುವ ಬರಹಗಾರರಾಗಿ ಗುರುತಿಸಿಕೊಂಡು ಗಟ್ಟಿ ಹೆಜ್ಜೆಯನ್ನಿಟ್ಟಿರುವ ವೈ.ಎಸ್.ಹರಗಿಯವರ ಈ ಮೂರನೇ ಕಥಾಸಂಕಲನ `ದೇವ್ರು ಬರ್ತಾನೆ ದಾರಿಬಿಡಿ’. ಸಣ್ಣ ಕತೆಗಳ ಲಕ್ಷಣ ಏನೆಲ್ಲಾ ಒಳಗೊಂಡ ಇಲ್ಲಿಯ ಕಥೆಗಳು ಗ್ರಾಮೀಣ ಬದುಕಿನ ಆಳ-ವಿಸ್ತಾರವನ್ನು ಕಂಡು, ಉಂಡು ಅನುಭವದ ರಸಘಟ್ಟಿಯಾಗಿ ಹುಟ್ಟಿಕೊಂಡಿವೆ. ಇದರಿಂದಾಗಿಯೇ ಈ ಕತೆಗಳಲ್ಲಿ ಬಡವರು, ಸಣ್ಣ ಪುಟ್ಟ ಕಾರುಬಾರಿನವರು, ಕೆಲಸ ಇಲ್ಲದವರು ಹೀಗೆ ಸಮಾಜದ ಸಾಮಾನ್ಯ ಸ್ತರದವರು ಉಸಿರಾಡುತ್ತಾರೆ. ಸಮಾಜದಲ್ಲಿ ನೆಲೆ ನಿಲ್ಲಲು ಹರಸಾಹಸ ಪಡುತ್ತಾರೆ, ಬದುಕಿಗಾಗಿ ಹೋರಾಡುತ್ತಾರೆ, ಏನೂ ಇಲ್ಲದೆಯೂ ಎಲ್ಲವನ್ನು ಒಳಗೊಂಡವರಂತೆ ಸುಖಿಸುತ್ತಾರೆ. ತಮ್ಮದೇ ಪ್ರಪಂಚವನ್ನು ಕಟ್ಟಿಕೊಳ್ಳುತ್ತಾರೆ. ಇದು ಸಾಧ್ಯವಾಗುವುದು ಹರಗಿ ಅವರಿಗೆ, ಆ ಎಲ್ಲಾ ಜನರ ಬಗೆಗಿರುವ ಪ್ರೀತಿ, ಅಭಿಮಾನ, ಸಹಾನುಭೂತಿಗಳಿಂದ. ಉತ್ತರ ಕರ್ನಾಟಕ ಭಾಷೆ ಇಲ್ಲಿಯ ಬಾಹ್ಯ ಸ್ತೋತ್ರವಾದರೆ, ಒಳಹರಿವು ಅನುಕಂಪ, ಇವೆರಡನ್ನೂ ಸಮರಸಗೊಳಿಸುತ್ತದೆ. ಲೇಖಕರದ್ದೇ ಆದ ಶೈಲಿ ಇವು ಮುಪ್ಪುರಿಗೊಂಡಾಗ ಕಥಾ ವಿಸ್ತರಣೆ ಪ್ರಿಯವಾಗುತ್ತದೆ. ಇದರಲ್ಲಿ ಎಲ್ಲಾ ಕತೆಗಳ ಪಾತ್ರಗಳು – ಸ್ವತಂತ್ರವಾಗಿ ಇರಬಹುದು, ಪ್ರತಿ ಪಾತ್ರಗಳಿಂದಾದರೂ ಆಗಬಹುದು – ಸಜೀವವಾಗಿ ಓದುಗರ ಮನೋಮಂದಿರದಲ್ಲಿ ನೆಲೆ ನಿಲ್ಲುತ್ತವೆ’ ಎನ್ನುತ್ತಾರೆ.

 

About the Author

ವೈ.ಎಸ್. ಹರಗಿ

ಕಾದಂಬರಿಕಾರ, ಕತೆಗಾರ ವೈ. ಎಸ್. ಹರಗಿ ಮೂಲತಃ ರೋಣ ತಾಲ್ಲೂಕಿನ ಹುಲ್ಲೂರಿನವರು. 1999ರಲ್ಲಿ ಕೆ. ಪಿ. ಎಸ್. ಸಿ. ಮುಖಾಂತರ ನೇರ ನೇಮಕಾತಿ ಹೊಂದಿ ನಂಜನಗೂಡು ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ‘ಉರಿವ ಜಲ’ ಕಾದಂಬರಿಗೆ 2014ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(ಚದುರಂಗ ದತ್ತಿ ನಿಧಿ) ಪ್ರಶಸ್ತಿಗಳು ದೊರೆತಿವೆ. ಕವಡೆಪುರದ ಕೌರವರು, ಸ್ವಪ್ನಗೆಜ್ಜೆ, ಕವಡೆಪುರದ ಕೌರವರು(ಕಾದಂಬರಿ), ಮೂಕ ಹಕ್ಕಿ ನಕ್ಕಾಗ, ಬಾರಪ್ಪಾ ಬಾರೋ ಮಳೆರಾಯ, ದೇವ್ರು ಬರ್ತಾನೆ ದಾರಿಬಿಡಿ (ಕಥಾ ಸಂಕಲನ), ಮ್ಯಾಕ್ಸ್ ಮುಲ್ಲರ್ (ಜೀವನ ಚರಿತ್ರೆ), `ಕಲ್ಲರಳಿ ಹೂವಾಗಿ’ ಅವರ ಪ್ರಕಟಿತ ಕೃತಿಗಳು. ...

READ MORE

Related Books