ಪ್ರವೃತ್ತಿಯಿಂದ ಬರಹಗಾರರಾದ ಕರ್ಕಿ ಕೃಷ್ಣಮೂರ್ತಿ ಅವರ ಸಣ್ಣ ಕತೆಗಳ ಸಂಗ್ರಹ ’ಗಾಳಿಗೆ ಮೆತ್ತಿದ ಬಣ್ಣ’.
ಈ ಕೃತಿಯ ನಿರೂಪಣೆಯಲ್ಲಿ ಕಥೆಗಾರ ಕಥೆಯನ್ನು ಹೇಳುತ್ತಾ ಓದುಗರು ಅದನ್ನು ಓದುತ್ತಾ ಸಾಗುವ ಲಯಗಾರಿಕೆಯನ್ನು ಕಾಣಬಹುದು. ಕತೆಗಾರರು ಹೇಳಿದ ಕತೆಯನ್ನು ಪ್ಯಾಸಿವ್ ಆಗಿ ಗ್ರಹಿಸುವ ಗ್ರಾಹಕರು ಒಂದೆಡೆಯಾದರೆ ನಿರೂಪಿಸುತ್ತಿರುವ ಕಥೆಗಾರರು ಮತ್ತೊಂದೆಡೆ ನಿಲ್ಲುತ್ತಾರೆ. ಇವರಿಬ್ಬರ ನಡುವಿನ ಸಂವಹನ ತಂತ್ರದ ಕಥನ ಶೈಲಿ ಈ ಕೃತಿಯಲ್ಲಿ ವಿಶೇಷವಾಗಿದೆ.
ಕರ್ಕಿ ಕೃಷ್ಣಮೂರ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯವರು. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಕೆಲಸದ ನಿಮಿತ್ತ ಮಸ್ಕತ್ ಹಾಗೂ ದುಬೈನಲ್ಲಿ ಕೆಲ ವರ್ಷ ನೆಲೆಸಿದ್ದು, ಪ್ರಸ್ತುತ ಬೆಂಗಳೂರಿನ ಕೊಲಿಯರ್ರ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದಾರೆ. ಓದು, ಸಿನೆಮಾ, ನಾಟಕ, ಪರ್ಯಟನೆ ಇವರ ಆಸಕ್ತಿಯ ಕ್ಷೇತ್ರಗಳು. 'ಮಳೆ ಮಾರುವ ಹುಡುಗ' 'ಗಾಳಿಗೆ ಮೆತ್ತಿದ ಬಣ್ಣ' ಅವರ ಕಥಾಸಂಕಲನಗಳು. 'ಚುಕ್ಕಿ ಬೆಳಕಿನ ಜಾಡು' ಕಾದಂಬರಿ ಪ್ರಕಟಿತ. 'ಸುಗಂಧಿ' ವಿಶೇಷಾಂಕದ ಸಂಪಾದಕರಾಗಿದ್ದರು. ‘ಮಾಸ್ತಿ ಕಥಾ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಆರ್.ಎನ್ ಹಬ್ಬು ದತ್ತಿ ಪ್ರಶಸ್ತಿ, ಸ್ವಸ್ತಿ ಪ್ರಕಾಶನದ ...
READ MORE