ಕಥೆಗಾರರಾದ ಗೋಪಾಲಕೃಷ್ಣ ಕುಂಜಿನಿ ಅವರು ಬರೆದಿರುವ ’ಅಪ್ಪನ ನೀಲಿಕಣ್ಣು’ ಹಲವು ಕಥೆಗಳ ಸಂಗ್ರಹ.
ಈ ಪುಸ್ತಕದಲ್ಲಿ ಒಟ್ಟು 27 ಕತೆಗಳಿವೆ. ಇಲ್ಲಿನ ಬಹುತೇಕ ಕತೆಗಳು ನಗರದ ತಲ್ಲಣಗಳನ್ನು ಪ್ರತಿಪಾದಿಸುವಂತದ್ದು. ಶೋಷಿತ ವರ್ಗದ ತುಮುಲಗಳ ಚಿತ್ರಣವನ್ನು ನೀಡುವಂತದ್ದು. ಗ್ರಾಮ್ಯ ನಗರಗಳ ಆತಂಕವನ್ನು ಬಿಂಬಿಸುವಂತದ್ದು.
ಅಪ್ಪನ ನೀಲಿಕಣ್ಣು, ಅವಳ ಇವನ ಬಳಿಕ ಕತೆಗಾರ ಹೇಳುವ ಕತೆ, ಬಿ ಕತೆ, ಬೂದಿ ಬೈರಾಗಿ ಅಥವಾ ಚಂದನ ಮಿಶ್ರಾ ಎಂಬುವನ ನಿಗೂಢ ಕತೆ, ಬುದ್ದನೇನಲ್ಲ, ದೇವರು ರಜೆ ಹಾಕಿದ, ಈ ಕಥೆಗೆ ಕೊನೆಯ ಪ್ಯಾರಾ ಬರೆದುಕೊಡಿ, ಸುಲಗ್ನೇ ಸಾವಧಾನಾ.., ಕಥೆಗಾರ ಹೇಳದ ಗುಟ್ಟಿನ ಕಥೆಯ ಮೊದಲಭಾಗ, ನದಿ ಮಾತನಾಡಲಿಲ್ಲ, ಮಿಸ್ಸಿಂಗ್ ಸ್ಟೋರಿ, ಮತ್ತೆ ಮೊಗ್ಗಾಗಿ, ತಪ್ಪು ನೋಡದೇ ಬಂದೆಯಾ??, ನೋ ಮಾನ್ಸ್ ಲ್ಯಾಂಡ್, ತೊಳಿಪ್ಪಟ್ಟೆ ದನ, ಕ್ರಶ್, ಮೆಸೇಜ್ ಸೆಂಟ್, ಐ ಯಾಮ್ ನಾಟ್ ವಾಟ್ ಐ ಯಾಮ್, ಮೆಹಂದಿ ಬೇಡುವ ಕೈಗಳು, ಬಾಹಿರ , ಅವಳು ಅತ್ತಿಹೂವು, ಕೆಂಪುಬೊಟ್ಟಿನ ಮೀನು, ಎಲ್ಲಿ ನೆಡಬೇಕು ನಾನೆಂಬ ಈ ಸ್ಥಿತಿಯ?, ಎಕ್ಸಿಟ್, ಪುನರಾಗಮನಾಯಚ, ಅಸ್ತಮಾನ ಹೂವಿನ ಮೂರನೇ ಎಸಳು, ಕ್ಷೇಮ,ತರುವಾಯ ತಿಳಿಸುವುದೇನೆಂದರೆ ಕತೆಗಳು ಈ ಕಥಾ ಸಂಕಲನದಲ್ಲಿದೆ.
ಹಿರಿಯ ಪತ್ರಕರ್ತರಾದ ಗೋಪಾಲಕೃಷ್ಣ ಕುಂಟಿನಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯವರು. ಕತೆಗಾರರಾಗಿರುವ ಗೋಪಾಲಕೃಷ್ಣ ಅವರು “ವೃತ್ತಾಂತ ಶ್ರವಣವು”, “ಆಮೇಲೆ ಇವನು”, ‘ಅಪ್ಪನ ನೀಲಿಕಣ್ಣು’, ‘ಪೂರ್ಣ ತೆರೆಯದ ಪುಟಗಳು’, “ವಿಲೇಜ್ ವರ್ಲ್ಡು ಮತ್ತು 24 ಕತೆಗಳು”, “ಮಾರಾಪು”ಎಂಬ ಕತೆಗಳ ಸಂಕಲನ ಮತ್ತು “ಈ ಚಳಿಗಾಲದಲ್ಲಿ ಅವಳು ಸಿಕ್ಕಿ” ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. “ಪುರುಷಾವತಾರ” ಅವರ ಕಾದಂಬರಿ. “ವಂಡರ್ ವೈ ಎನ್ ಕೆ” ಮತ್ತು “ಮಳೆಯಲ್ಲಿ ನೆನೆದ ಕತೆಗಳು” ಅವರ ಸಂಪಾದಿತ ಕೃತಿಗಳು. ಪತ್ರಕರ್ತ ಗೆಳೆಯ ಜೋಗಿ (ಗಿರೀಶರಾವ್ ಹತ್ವಾರ) ಅವರೊಂದಿಗೆ ಸೇರಿ ಆರಂಭಿಸಿದ ’ಕಥಾಕೂಟ’ವು ...
READ MORE