ಲೇಖಕ ವಿಕಾಸ ನೇಗಿಲೋಣಿ ಅವರ ‘ಮಳೆಗಾಲ ಬಂದು ಬಾಗಿಲು ತಟ್ಟಿತು’ ಎಂಬುದು 11 ಕಥೆಗಳ ಸಂಕಲನ. ಅವರು ಸುಖವಾಗಿ ಬಾಳಿದರು, ಬಾಗಿಲು ತೆಗೆಯೇ ಸೇಸಮ್ಮಾ, ಇಂದಿರೆಗೆ ತಲೆಬಾಗಿ ವಂದಿಸುತ ಪರಮಾನಂದ ಭಕ್ತಿಯೊಳ್, ಕದ ಬಾಗಿಲಿರಿಸಿಹ ಕಳ್ಳಮನೆ, ಕೆಂಪು ರಕ್ತಕಣಗಳು, ಕೊನೆಯ ಕ್ಷಣಗಳ ಬದಲಾವಣೆಯ ಹೊಸದಾಗಿ, ಮಳೆಗಾಲ ಬಂದು ಬಾಗಿಲು ತಟ್ಟಿತು,ಮೇಲಿಂದ ಕೆಳಕ್ಕೆ ಮೂರಕ್ಷರ, ಮುಂದಿನ ದೇಖಾವೆ, ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ, ಊರ್ಮಿಳಾ ಫೋನು ಮಾಡಿದಾಗ ಮಧ್ಯಾಹ್ನ ಎಂಬ ಶೀರ್ಷಿಕೆಗಳ ಕಥೆಗಳು ಈ ಕೃತಿಯಲ್ಲಿದೆ.
ಕತೆಗಳನ್ನು ಓದುತ್ತಿದ್ದಂತೆಯೇ ನೇಗಿಲೋಣಿಯ ಕಥಾಜಗತ್ತು ಅಂತರಂಗಕ್ಕೆ ಸೇರಿದ್ದು. ತುಂಬ ಭಾವುಕರಾದ ಕತೆಗಾರ, ಹೂವಿನ ಎಸಳು ಬಿದ್ದಾಗಲೂ ಕಂಪನವನ್ನೆಬ್ಬಿಸುವ ಪ್ರಶಾಂತ ಸರೋವರ. ನೇಗಿಲೋಣಿ ಕೂಡ ಅಂಥವರೇ. ಅವರಿಗೆ ಬಿಕ್ಕಳಿಸುವುದಕ್ಕೆ ಅತಿಚಿಕ್ಕ ಕಾರಣವೂ ಸಾಕು ಎಂಬುದಾಗಿ ಲೇಖಕ, ಕಥೆಗಾರ ಜೋಗಿಯ ಮಾತುಗಳನ್ನು ಈ ಕೃತಿಗೆ ಬರೆದ ಮುನ್ನುಡಿಯಲ್ಲಿ ಕಾಣಬಹುದು. ‘ಈ ಕತೆಗಳಲ್ಲಿರುವ ಜಗತ್ತು ಫ್ಯಾಂಟಸಿಯಲ್ಲ. ವಾಸ್ತವ ಮತ್ತು ಕಲ್ಪನೆ ಬೆರೆತ ವಿಚಿತ್ರ ಸಂಯೋಗದಲ್ಲಿ ಈ ಪಾತ್ರಗಳು ಜೀವ ತಳೆಯುತ್ತವೆ. ಹೀಗಾಗಿ, ಇದು Fact ಮತ್ತು Fiction ಬೆರೆತ Faction ಜಗತ್ತು. ಇದನ್ನು ಓದಿದ ನಂತರ ನಿಮಗೆ ಎದುರಾಗುವ ವ್ಯಕ್ತಿಗಳ ಒಳಗುದಿ ಒಂದಿಷ್ಟು ತಿಳಿಯಬಹುದು’ ಎಂದು ಜೋಗಿ ಅಭಿಪ್ರಾಯಪಟ್ಟಿದ್ದಾರೆ.
ವಿಕಾಸ ನೇಗಿಲೋಣಿ, ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ನೇಗಿಲೋಣಿಯಲ್ಲಿ. ಊರಲ್ಲೇ ಪ್ರಾಥಮಿಕ ಶಿಕ್ಷಣ, ಉಡುಪಿಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದರು. ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ವ್ಯಾಸಂಗ ಪೂರ್ಣಗೊಳಿಸಿದರು. ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿ, ಅನಂತರ ವಿಜಯ ಕರ್ನಾಟಕ, ಉದಯವಾಣಿ, ಕನ್ನಡ ಪ್ರಭ, ಸುವರ್ಣ ನ್ಯೂಸ್, ಸಖಿ ನಿಯತಕಾಲಿಕೆಗಳಲ್ಲಿ ಸುಮಾರು 16 ವರ್ಷಗಳ ಕಾಲ ವೃತ್ತಿ ನಿರ್ವಹಿಸಿದರು. ‘ಯಶೋದೆ’, ‘ಗಾಂಧಾರಿ’ ಸೇರಿದಂತೆ ಹಲವು ಧಾರಾವಾಹಿಗಳಿಗೆ ಸಂಭಾಷಣೆ ರಚಿಸಿದ್ದಾರೆ. ‘ಯಶೋದೆ’, ‘ಗಾಂಧಾರಿ’, ‘ರಾಧಾ ರಮಣ’, ‘ಅಗ್ನಿಸಾಕ್ಷಿ’, ‘ಸೀತಾವಲ್ಲಭ’, ‘ನಮ್ಮನೆ ಯುವರಾಣಿ’, ‘ಮಿಥುನ ರಾಶಿ’ ಮೊದಲಾದ ಧಾರಾವಾಹಿಗಳಿಗೆ ಹಾಡುಗಳನ್ನು ಬರೆದ ...
READ MORE