‘ಕೆಂಪು ಹಾಳೆಯ ಹೂವು’ ಲೇಖಕ ಆನಂದ ಭೋವಿ ಅವರ ಕಥಾಸಂಕಲನ. ‘ಆನಂದ ಭೋವಿಯವರು ಸಾಮಾಜಿಕ ಸಭ್ಯತೆಯ ಚೌಕಟ್ಟಿನಲ್ಲಿ ಬರವಣಿಗೆಯನ್ನು ನಡೆಸಿಕೊಂಡು ಹೋಗುವ ಆಶಯವನ್ನು ಇರಿಸಿಕೊಂಡಿದ್ದಾರೆ. ಇದಕ್ಕೆ ಅವರ ಸೌಜನ್ಯ ಪೂರ್ವಕ ವ್ಯಕ್ತಿತ್ವವೂ ಕಾರಣವಾಗಿರಬಹುದು ಎನ್ನುತ್ತಾರೆ ಹಿರಿಯ ಲೇಖಕ ಚನ್ನಪ್ಪ ಅಂಗಡಿ’.
ಸುಮ್ಮನಿರದ ಗಜಲ್ ಹೆಸರಿನ ಕವನ ಸಂಕಲನ ಮತ್ತು ಹಿಡಿ ಮಣ್ಣಿನ ಬೊಗಸೆ, ಮುತ್ತು ಕಟ್ಯಾಳ ನಮ್ಮವ್ವ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿರುವ ಆನಂದ ಭೋವಿಯವರಿಗೆ ಹಲವು ಮುಖ್ಯ ಸಾಹಿತ್ಯಿಕ ಪ್ರಶಸ್ತಿಗಳೂ ಪ್ರಾಪ್ತವಾಗಿ ಅವರಲ್ಲಿ ಬರೆಯುವ ಉತ್ಸಾಹವನ್ನು ಹೆಚ್ಚಿಸಿವೆ, ಅಂತೆಯೇ ಈ ಕಥಾಸಂಕಲನದಲ್ಲಿ ಬದುಕನ್ನು ಇತ್ಯಾತ್ಮಕವಾಗಿ ಪರಿಭಾವಿಸುವ ಅನೇಕ ಕಥೆಗಳಿವೆ. ಸಾಮಾಜಿಕವಾಗಿ ಸ್ವೀಕರಿಸಲ್ಪಟ್ಟ ಮೌಲ್ಯಾದರ್ಶಗಳ ಬಗೆಗಿನ ಶ್ರದ್ದೆಯನ್ನು ಉದ್ದೇಪಿಸುವ ಕಥನ ಕ್ರಮವೊಂದನ್ನು ಇಲ್ಲಿ ಕಾಣಬಹುದಾಗಿದೆ.
ಸವದತ್ತಿ ತಾಲೂಕಿನ ಉಗರಗೋಳದ ಆನಂದ ಭೋವಿಯವರು ಸದ್ಯ ನರಗುಂದ ತಾಲೂಕಿನ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಾಗಿ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. “ಮುತ್ತು ಕಟ್ಯಾಳ ನಮ್ಮವ್ವ” 2014ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುರಸ್ಕೃತಗೊಂಡ ಕಥಾಸಂಕಲನ. ‘ಹಿಡಿ ಮಣ್ಣಿನ ಬೊಗಸೆ’ ಕಥಾಸಂಕಲನ, ‘ಸುಮ್ಮನಿರದ ಗಜಲ್’ ಕವನ ಸಂಕಲನ ಪ್ರಕಟಗೊಂಡಿವೆ. 2015ರಲ್ಲಿ ಬೇಂದ್ರೆ ಗ್ರಂಥ ಬಹುಮಾನ ದೊರಕಿದೆ. ಹಲವಾರು ಕತೆ ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಹಲವು ಕತೆಗಳು ಬಹುಮಾನ ಪಡೆದಿವೆ. ಚಿಕ್ಕುಂಬಿ ಮಠದಿಂದ ಅಜಾತಶ್ರೀ ...
READ MORE