`ಸರಸ್ವತಿ ಅಕಾಡೆಮಿ’ ಎನ್.ಸಿ. ಮಹೇಶ್ ಅವರ ಕಥಾಸಂಕಲನವಾಗಿದೆ. ಲೇಖಕರು ಹೇಳುವಂತೆ ಇಲ್ಲಿನ ಬಹುತೇಕ ಕಥೆಗಳಲ್ಲಿನ ಕಥಾಲೋಕ ಒಂದೇ ವಸ್ತುವಿನ ಸುತ್ತ ಸುಳಿ ತಿರುಗಿದೆ. ನನ್ನನ್ನು ತೀರಾ ಹತ್ತಿರದಿಂದ ಬಲ್ಲವರಿಗೆ ಇಲ್ಲಿ ಸುಳಿ ತಿರುಗಿರುವ ವಸ್ತು ಕಾಣುವ ಬಗ್ಗೆ ಬೇರೆ; ಅಪರಿಚಿತರಲ್ಲಿ ಈ ಕಥೆಗಳು ವಸ್ತು ವಿನ್ಯಾಸ ಮತ್ತು ತಂತ್ರಗಳಿಗೆ ಸಂಬಂಧಿಸಿದಂತೆ ಕೆಲವು ಅನುಮಾನಗಳನ್ನು ಹುಟ್ಟುಹಾಕಬಹುದು. ಒಂದೇ ಕಥಾವಸ್ತು ಬೇರೆಬೇರೆ ಛಾಯೆಗಳಲ್ಲಿ ರೂಪಾಂತರ ಹೊಂದಿರುವುದು ಅರಿವಿಗೆ ಬರುತ್ತದೆ. ಇದು ಏಕತಾಮ ಅನಿಸಬಹುದು, ಚೂರು ಆತ್ಮಕಥನಾತ್ಮಕ ಅನಿಸಲೂಬಹುದು. ಒಟ್ಟಿನಲ್ಲಿ ಅನುಮಾನಗಳನ್ನು ಹುಟ್ಟಿಸುವುದಂತೂ ನಿಜ. ಸಾಹಿತ್ಯ ಲೋಕದಲ್ಲಿರುವ ಢೋಂಗಿತನದ ವಿವರಗಳು ಇಲ್ಲಿ ಹೇರಳವಾಗಿ ಕಾಣಿಸಿಕೊಂಡಿವೆ. ಅವು ಲೇಖನನ್ನು ಸುತ್ತುವರೆದು ಭ್ರಮೆ ಕಳಚಿದ್ದರಿಂದ ಆ ಒಟ್ಟು ಕಾಲಘಟ್ಟ ಮತ್ತು ಮನಸ್ಥಿತಿ ಇಲ್ಲಿ ಪುನಾರಾವರ್ತನೆಯಾಗಿದೆ. ಅಥವಾ ಆದಂತೆ ಅನಿಸುತ್ತದೆ. ಒಂದೇ ವಸ್ತುವಿನ ಸುತ್ತ ಗಿರಕಿ ಹೊಡೆಯಿವ ಇಲ್ಲಿನ ಬಹುತೇಕ ಕಥೆಗಳನ್ನು ಬರೆಯುತ್ತಿದ್ದ ಕಾಲಘಟ್ಟದಲ್ಲಿ ಲೇಖಕನ ಮನಸ್ಸು ಕದಡಿತ್ತು. ಸಿಟ್ಟು ವ್ಯಂಗ್ಯವಾಗಿ ಮಾರ್ಪಾಟಾಗುತ್ತಿತ್ತು. ಆದರೆ ಕಾಲ ಸರಿದಂತೆ ಇವುಗಳನ್ನು ಮತ್ತೆ ಓದಲು ಶುರುಮಾಡಿದಾಗ ಲೇಖಕರಲ್ಲಿ ಹಲವು ಪ್ರಶ್ನೆಗಳು ಎದ್ದವು ಎಂದು ಈ ಕೃತಿಯಲ್ಲಿ ತಿಳಿಸಿದ್ದಾರೆ.
ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗದಲ್ಲಿರುವ ಬೆಣಚನಹಳ್ಳಿಯಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ನಂತರ ಕೆಲಕಾಲ ಕನ್ನಡ ಪ್ರಭ ಹಾಗೂ ಪ್ರಜಾವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಣೆ. ಮೇಷ್ಟ್ರು ವೃತ್ತಿ ಬಗ್ಗೆ ಮೊದಲಿಂದ ತೀವ್ರತರ ಒಲವು. ಪರಿಣಾಮವಾಗಿ ಕೆಲ ಕಾಲ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕಾರ್ಯನಿರ್ವಹಣೆ. ಪ್ರಸ್ತುತ ಸುರಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನ ಕೆಲಸ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ. ‘ಬೆಳಕು ಸದ್ದುಗಳನ್ನು ಮೀರಿ’ , ‘ ಸರಸ್ವತಿ ಅಕಾಡಮಿ’- ಕಥಾಸಂಕಲನಗಳು. ‘ ತಮ್ಮ ತೊಟ್ಟಿಲುಗಳ ತಾವೇ ಜೀಕಿ’ – ಕಾದಂಬರಿ. ‘ ...
READ MORE