ಲೇಖಕ ಮಂಜುನಾಥ ಕಾಮತ್ ಅವರ ಕೃತಿ-ಚಂದದ ಹಲ್ಲಿನ ಹುಡುಗಿ ಮತ್ತು 18 ಅವಳುಗಳ ಕಥೆ. ಕೃತಿಯ ಶೀರ್ಷಿಕೆಯೇ ಹೇಳುವ ಹಾಗೆ ಒಂದು ಹೆಣ್ಣನ್ನು ಕೇಂದ್ರೀಕರಿಸಿ ಲೇಖಕರು ತಮ್ಮ ಕಲ್ಪನೆಗಳನ್ನು ಕಥೆಗಳಾಗಿ ಹೆಣೆದಿದ್ದು ಇಲ್ಲಿಯ ವೈಶಿಷ್ಟ್ಯ. ವಿಷಯ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದವರು. ತಂದೆ ರಾಮಚಂದ್ರ ಕಾಮತ್. ತಾಯಿ ಗಾಯತ್ರಿ ಕಾಮತ್. ವೃತ್ತಿಯಲ್ಲಿ ಪತ್ರಿಕೋದ್ಯಮ ಉಪನ್ಯಾಸಕರು. ಪ್ರವಾಸ, ಬರೆವಣಿಗೆ ಹವ್ಯಾಸ. ಸಾಮಾಹಿಕ ಜಾಲತಾಣಗಳನ್ನು ಬಳಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ. ಒಂದಷ್ಟು ಓದುಗ ಯುವಕರು ಸೇರಿಕೊಂಡು ಆರಂಭಿಸಿದ್ದ ಬಿಳಿಕಲ್ಲು ಪ್ರಕಾಶನದ ಮೂಲಕ ಪುಸ್ತಕಗಳ ಪ್ರಕಟಣೆ. ಹೊಸ ಓದುಗರನ್ನು ಸೃಷ್ಟಿಸುವ, ತಲುಪುವ ಆಸಕ್ತಿ. ...
READ MORE