‘ಇನ್ನಾಸಪ್ಪ ಮತ್ತು ಬಂಡೆಗಳು’ ಎಫ್. ಎಂ. ನಂದಗಾವ ಅವರ ಕಥಾಸಂಕಲನವಾಗಿದೆ. ಉಪದೇಶಿಗಳನ್ನು ಕಂಡು ಮಾತಾಡಿ ಹಾಗೂ ಬಲ್ಲವರಿಂದ ಕೇಳಿ ತಿಳಿದು ಅವುಗಳಿಗೆ ಕಲ್ಪನೆಯ ರೆಕ್ಕೆಗಳನ್ನು ಕಟ್ಟಿ ಈ ಕತೆಗಳನ್ನು ಹೆಣೆಯಲಾಗಿದೆ. ಕತೆಯ ನಿರೂಪಣೆಯೊಂದಿಗೆ ಕ್ರಿಸ್ತುವ ಧರ್ಮದಲ್ಲಿ ಹಾಸುಹೊಕ್ಕಾಗಿರುವ ಸ್ಥಳೀಯ ಜಾನಪದ ಆಚರಣೆಗಳನ್ನು, ಸಾಧುಸಂತರ ಚರಿತ್ರೆಗಳನ್ನು ಮತ್ತು ಧರ್ಮದ ಕಟ್ಟುಕಟ್ಟಲೆಗಳನ್ನೂ ಪ್ರಾಸಂಗಿಕವಾಗಿ ನಿರೂಪಿಸುವ ನಂದಗಾವ ಅವರು ಈ ಕತೆಗಳ ಮೂಲಕ ಕ್ರಿಸ್ತುವರ ಬದುಕನ್ನು ತೆರೆದಿಡುತ್ತಾರೆ.
ಬರಹಗಾರ, ಅನುವಾದಕ ಎಫ್.ಎಂ.ನಂದಗಾವ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂಗ್ಲಿಷ್ ಇಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಕೃತಿಗಳ ಅನುವಾದ ಮಾಡುವ ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ ಖ್ಯಾತ ಕ್ರಿಸ್ಮನ್ ಕಥೆಗಳು, ಮೂರು ಸತ್ಯಗಳು, ಇಬ್ಬರು ವೃದ್ಧರ ತೀರ್ಥಯಾತ್ರೆ, ಮೂರು ಕ್ರಿಸ್ಮಸ್ ದೈವಗಳು, ಬದುಕಲು ಏನು ಬೇಕುThe Little Flower of India ಹಾಗೂ Lead Kindly Light ಮುಂತಾದವು ...
READ MORE