ವರ್ಣಾವರ್ಣ

Author : ಎಸ್.ಆರ್. ಗುರುನಾಥ್

Pages 142

₹ 80.00




Year of Publication: 2008
Published by: ಅಪೂರ್ವ ಪ್ರಕಾಶನ
Address: ಸಿಂಗಾಪುರ, ಚಿತ್ರದುರ್ಗ ಜಿಲ್ಲೆ- 577555

Synopsys

‘ವರ್ಣಾವರ್ಣ’ ಲೇಖಕ ಎಸ್. ಆರ್. ಗುರುನಾಥ್ ಅವರ ಕಥಾ ಸಂಕಲನ. ಅಲ್ಲಿನ ಕಥೆಗಳಲ್ಲಿ ದಲಿತ ಸಮುದಾಯದ ಸ್ಥಿತಿ-ಗತಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ. ದಲಿತರು ಅನುಭವಿಸುವ ಅವಮಾನಗಳು ಕಥೆಯ ವಸ್ತು. ಹಳ್ಳಿಗಳಲ್ಲಿರುವ ಅವಿದ್ಯಾವಂತ ಜನರ ಮೇಲಾಗುವ ಕ್ರೌರ್ಯ ಮತ್ತು ಅವರು ಅನುಭವಿಸುವ ಯಾತನೆಗಳನ್ನು ಸಹಜವಾಗಿ ಮುಟ್ಟಿಸಿದ್ದಾರೆ.

About the Author

ಎಸ್.ಆರ್. ಗುರುನಾಥ್

ಕಥೆಗಾರ, ಸಾಹಿತಿ ಎಸ್.ಆರ್. ಗುರುನಾಥ್ ಅವರ ಹುಟ್ಟೂರು ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಸಿಂಗಾಪುರ. ಅನೇಕ ವರ್ಷಗಳಿಂದಲೂ ಚಿತ್ರದುರ್ಗದ ಐಯುಡಿಪಿ ಬಡಾವಣೆಯಲ್ಲಿ ವಾಸವಾಗಿದ್ದರು. ಬಡತನ, ಶೋಷಣೆ ಅದರ ಜತೆಗೆ ದಲಿತ ಸಮುದಾಯದವರ ಮೇಲೆ ಆಗಿಂದಾಗ್ಗೆ ಆಗುತ್ತಿದ್ದ ಅಪಮಾನ, ಆತಂಕ, ತಲ್ಲಣಗಳೇ ಅವರನ್ನು ಬರವಣಿಗೆಯತ್ತ ಪ್ರೇರೇಪಿಸಿತು. ದೌರ್ಜನ್ಯ, ನೋವುಗಳಿಗೆ ಅಕ್ಷರದ ರೂಪ ನೀಡುವ ಮೂಲಕ ಹಿಂದುಳಿದ ಸಮುದಾಯಗಳ ದನಿಯಾಗಿ 4 ದಶಕಗಳ ಕಥೆಗಾರರಾಗಿ ಅನೇಕ ಕಥೆ, ಕವನಗಳನ್ನು ಬರೆದಿದ್ದಾರೆ. ಒಡಂಬಡಿಕೆ, ಹಾಡು, ದಲಿತದನಿ, ಕೆರೆಗೆ ಹಾರವಾದ ಬಂದಮ್ಮನ ಇತಿಹಾಸ, ಅಧೋಲೋಕ, ವರ್ಣಾವರ್ಣ ಹೀಗೆ ಅನೇಕ ಕಥೆ, ಕವನ ಸಂಕಲನವನ್ನು ...

READ MORE

Reviews

ಪುಸ್ತಕ ಪರಿಚಯ: ಕೃಪೆ: ಹೊಸತು 

ಈ ಕಥೆಗಳನ್ನು ಬರೆದ ಲೇಖಕರಿಗೆ ದಲಿತ ಸಮುದಾಯದ ಸ್ಥಿತಿ ಗತಿಗಳು, ಅವರ ಬವಣೆಗಳನ್ನು ಜನರಿಗೆ ತಲುಪಿಸುವ ಸಾಮಾಜಿಕ ಕಳಕಳಿ ಮತ್ತು ಹೊಣೆ ಇರುವುದು ವ್ಯಕ್ತವಾಗುತ್ತದೆ. ಕಥಾರೂಪದಲ್ಲಿ ಬರೆಯಲ್ಪಟ್ಟರೂ ಕೆಳವರ್ಗದ ಜನರು ಇಂದು ಅನುಭವಿಸುತ್ತಿರುವ ನಾನಾತರದ ಹಿಂಸೆ ಅವಮಾನಗಳು ಅವರ ನಿಜ ಬದುಕಿನ ಚಿತ್ರಣದಂತೆಯೇ ಇವೆ. ಇವು ಕಥಾರೂಪದ ವಾಸ್ತವಗಳು. ಗ್ರಾಮೀಣ ಪ್ರದೇಶಗಳಲ್ಲಿ ಅವಿದ್ಯಾವಂತ ಜನರು ಇದನ್ನು ಸಹಿಸಿಕೊಂಡು ದಾರುಣ ಬಾಳು ನಡೆಸುತ್ತಿರುವುದು ಸತ್ಯ. ಒಂದು ಸಮಗ್ರ ಕೆಳವರ್ಗದ ಜನ ಜೀವನದ ಚಿತ್ರಣವನ್ನು ಈ ಕಥೆಗಳು ಕೊಡುತ್ತವೆ. ಎಲ್ಲ ಕಥೆಗಳಲ್ಲೂ ಪಾತ್ರಗಳು ತಮ್ಮ ತೂಕವನ್ನು ಉಳಿಸಿಕೊ೦ಡಿವೆ.

– ಇಂದಿರಾಕುಮಾರ 

 

Related Books