ನಿಂದ ನಿಲುವಿನ ಘನ

Author : ಕಲ್ಲೇಶ್ ಕುಂಬಾರ್

Pages 128

₹ 150.00




Year of Publication: 2020
Published by: ಸಿವಿಜಿ ಪಬ್ಲಿಕೇಷನ್ಸ್
Address: # 277, 5ನೇ ಅಡ್ಡರಸ್ತೆ, ವಿಧಾನಸೌಧ ವಿಸ್ತರಣೆ, ಲಗ್ಗೆರೆ, ಬೆಂಗಳೂರು-560058

Synopsys

‘ನಿಂದ ನಿಲುವಿನ ಘನ’ ಈ  ಕಥಾ ಸಂಕಲನ ಲೇಖಕ ಕಲ್ಲೇಶ್ ಕುಂಬಾರ್.  ಒಂಬತ್ತು ಕಥೆಗಳು ಸಂಕಲನಗೊಂಡಿವೆ. ಸದ್ಯದ ಗ್ರಾಮೀಣ ಸಮಾಜದಲ್ಲಿನ ಹಿಂಸೆ, ಅಸಮಾನತೆ, ಬಲಿಷ್ಠರ ಅಟ್ಟಹಾಸ, ದುರ್ಬಲರ ಮೇಲಿನ ದೌರ್ಜನ್ಯ, ಜನರ ಡಾಂಭಿಕತೆ, ಮೋಸ-ವಂಚನೆ ಮೊದಲಾದ ಸಂಗತಿಗಳೇ ಇಲ್ಲಿ ಕಥೆಯ ಹಂದರಗಳಾಗಿವೆ. ಜೊತೆಗೆ, ಜೀತಪದ್ಧತಿ, ಜಾತಿ ಪದ್ಧತಿ, ಮತಾಂತರ, ಕೋಮುವಾದ, ರಾಜಕಾರಣದ ವಿಕಾರ ಸ್ವರೂಪ ಕೂಡ ಚಿಕಿತ್ಸಕ ನೋಟಕ್ಕೆ ಒಳಪಟ್ಟಿವೆ. ಪ್ರತಿ ಕತೆಯಲ್ಲಿಯೂ ದಟ್ಟವಾದ ವಿವರ, ರೂಪಕ, ಪ್ರತಿಮೆ, ಸನ್ನಿವೇಶ, ಪಾತ್ರಗಳನ್ನು ಅಧಿಕೃತವಾಗಿ ಚಿತ್ರಿಸುವ ಕಲ್ಲೇಶ್, ತಾವು ಕಟ್ಟಿಕೊಡುವ ಜೀವನ ಸಂದರ್ಭಗಳ ಮೂಲಕ ಸಮಕಾಲೀನ ನಾಗರಿಕತೆಯ ಸ್ವರೂಪವನ್ನೂ, ಅದರ ವೈವಿಧ್ಯಮಯ ಪರಿಣಾಮಗಳನ್ನೂ ಸ್ಪರ್ಶಿಸಿ ಬಿಡುವ ಮಹತ್ವಾಕಾಂಕ್ಷೆಯಲ್ಲಿ ತಮ್ಮ ಕತೆಗಳನ್ನು ರಚಿಸಿದ್ದಾರೆ.

About the Author

ಕಲ್ಲೇಶ್ ಕುಂಬಾರ್
(06 May 1967)

ಬೆಳಗಾವಿ ಜಿಲ್ಲೆಯ ಹಾರೂಗೇರಿ ಗ್ರಾಮ (ಜನನ: 06-05-1967) ಹುಟ್ಟೂರು. ಧಾರವಾಡ, ದಾವಣಗೆರೆ ಮತ್ತು ಬೀದರ್ ನಲ್ಲಿ ವಿದ್ಯಾಭ್ಯಾಸ. ಹಾರೂಗೇರಿಯ ಶ್ರೀ ಕರೇಸಿದ್ಧೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ  ಮುಖ್ಯೋಪಾಧ್ಯಾಯರಾಗಿದ್ದರು.  'ಉಸುರಿನ ಪರಿಮಳವಿರಲು' ಕಥಾಸಂಕಲನ ಮತ್ತು 'ಪುರುಷ ದಾರಿಯ ಮೇಲೆ' ಕವನಸಂಕಲನಗಳ ಪ್ರಕಟಣೆ. ಜೊತೆಗೆ,ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಥೆ, ಕವನ,ಲೇಖನಗಳ ಪ್ರಕಟಣೆಯಾಗಿವೆ.  'ಪಾಪು ಕಥಾ ಪ್ರಶಸ್ತಿ', 'ಜಯತೀರ್ಥ ರಾಜಪುರೋಹಿತ ಕಥಾ ಪ್ರಶಸ್ತಿ', 'ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ, 'ವಿಜಯವಾಣಿ ದೀಪಾವಳಿ ಕಥಾಸ್ಪರ್ಧೆ', 'ಕರವೇ ಮಾಸಿಕದ ಕಥಾಸ್ಪರ್ಧೆ', 'ಗುರುತು ಮಾಸಿಕ ಕಥಾಸ್ಪರ್ಧೆ', 'ಪ್ರಜಾವಾಣಿ ದೀಪಾವಳಿ ಕಾವ್ಯಸ್ಪರ್ಧೆ', 'ತಿಂಗಳು ಮಾಸಿಕ ಪತ್ರಿಕೆಯ ಕಾವ್ಯಸ್ಪರ್ಧೆ', 'ಮೊಗವೀರ ಮಾಸಿಕದ ...

READ MORE

Related Books