ಸ್ತ್ರೀ ಸಂವೇದನೆಯುಳ್ಳ ಕತೆಗಾರ್ತಿ ಗೀತಾ ನಾಗಭೂಷಣ್ ಅವರ ಕತೆಗಳಲ್ಲಿ ಹೆಣ್ಣಿನ ತಾಯ್ತನದ ಹಕ್ಕನ್ನು, ಸ್ವಾತಂತ್ಯ್ರವನ್ನು ಪ್ರತಿಪಾದಿಸುತ್ತವೆ. ನಾಡಿನ ಪ್ರಮುಖ ದಿನ ಪತ್ರಿಕೆ, ಮಾಸಿಕ ಪತ್ರಿಕೆಗಳಲ್ಲಿ ಇಲ್ಲಿಯ ಎಲ್ಲ ಕತೆಗಳು ಪ್ರಕಟವಾಗಿವೆ. ಗೌರಮ್ಮ, ಸೀನಿಂಗಿ, ನೀಲಗಂಗಾ ಈ ಪಾತ್ರಗಳು ಸಮಾಜದ ಕಾಲ್ತುಣಿತಕ್ಕೊಳಪಟ್ಟ ಪ್ರತೀಕಗಳಾಗಿವೆ.
ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...
READ MORE