ಆಮೆ (ಕಥಾ ಸಾಕಲನ)

Author : ಸ್ನೇಹಲತಾ ದಿವಾಕರ್‌

Pages 136

₹ 200.00




Year of Publication: 2021
Published by: ಕೈರಾಲಿ ಪ್ರಕಾಶನ
Address: ಸುಬ್ಬಯ್ಯಕಟ್ಟೆ , ಕುದಲ್ಮರ್ ಕಲ, ಕಾಸರಗೋಡು ಜಿಲ್ಲೆ
Phone: 9446395295

Synopsys

‘ಆಮೆ’ ಸ್ನೇಹಲತಾ ದಿವಾಕರ್ ಅವರ ಕಥಾಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ರಾಧಾಕೃಷ್ಣ ಬೆಳ್ಳೂರು, ‘ಇಲ್ಲಿ ಮಹತ್ವಾಕಾಂಕ್ಷೆಯ ನಡುವೆ ಕಾಲೆಳೆಯುವ ಪರಿಮಿತಿಗಳು ಹಾವು-ಏಣಿ ಆಟದಂತೆ ಮೇಲೇರುತ್ತ ಬೀಳುತ್ತ ಪರಿಧಿ ದಾಟಲಾಗದ ಅಸಹಾಯಕತೆಯನ್ನು ಸೃಷ್ಟಿಸುತ್ತವೆ. ಒಳಗೊಳಗೇ ಮೀಟುವ ನೋವಿನ ತಂತಿಯೊಂದು ಎಲ್ಲ ಕತೆಗಳ ಆಳದಲ್ಲೂ ಮಂದ್ರ ಸ್ಥಾಯಿಯ ನಾದದೊಂದಿಗೆ ಏಕಸೂತ್ರವಾಗಿ ನಿಲ್ಲುತ್ತದೆ. ಭ್ರಮೆಗಳನ್ನೂ ಕಳಚಿಕೊಂಡ ಬದುಕೊಂದು ಬತ್ತಲಾಗಿ ನಿಂತು, ತನ್ನ ಅವಯವಗಳನ್ನು ತಾನೇ ಕಟ್ಟಿಕೊಂಡು ವಿಚತ್ರ ನೋವಿಗೆ ಸುಖಪಡುವ ಭಾವ ಎಲ್ಲ ಕಥೆಗಳಲ್ಲೂ ಮಿಸುಕಾಡುತ್ತದೆ. ಬದ್ಧತೆಯ ಹಂಗಿಲ್ಲದ ಈಕೆಯ ಕಥೆಗಳಿಗೆ ಕಥೆಗಾರ್ತಿಯ ನಿಯಂತ್ರಣ ಮೀರಿ ಬೆಳೆದು ನಿಲ್ಲುವ ಜೀವಂತಿಕೆ ಇದೆ. ತಾವೇ ಕಟ್ಟಿಕೊಂಡ ಸಮಾಜದ ನಡುವಿನಿಂದ ಧುತ್ತೆಂದು ನೆಗೆದು ನಿಲ್ಲುವ ಕಥಾ ಪಾತ್ರಗಳಿಗೆ ಬದುಕಿನ ಆಳ ಪದರುಗಳನ್ನು ಮೆತ್ತಗೆ ಚಿವುಟುವ ತುಂಟನದ ಛಾಯೆ ಇದೆ. ಭದ್ರತೆಯ ನಡುವಿನ ತಲ್ಲಣಗಳು, ಸುಖದ ಒಳಗೆ ಕಿಡಿಕೂತ ನೋವುಗಳು, ಭ್ರಮನಿರಸನದ ನಡುವಿನಿಂದ ಮಿಡಿಯುವ ತಲ್ಲಣಗಳು ಈ ಸಂಕಲನದಲ್ಲಿ ಕಥೆಗಳಾಗಿ ರೂಪಾಂತರಗೊಂಡದ್ದರ ಹಿಂದೆ ನಿಜದ ನೆರಳಿನ ನರಳಾಟವಿದೆ. ಇದು ಕೇವಲ ಕಥೆಗಳಲ್ಲ, ಪಜ್ಞೆಯ ಆಳದಲ್ಲಿ ನಡೆದ ಮಹಾ ಯುದ್ಧವೊಂದರಲ್ಲಿ ತುಂಡಾಗಿ ಬಿದ್ದ ಮಸೆದ ಅಲಗಿನ ತುಣುಕಗಳು ಅಷ್ಟೇ’ ಎಂದಿದ್ದಾರೆ.

About the Author

ಸ್ನೇಹಲತಾ ದಿವಾಕರ್‌

ಕತೆಗಾರ್ತಿ ಸ್ನೇಹಲತಾ ದಿವಾಕರ್‌ ಕಾಸರಗೋಡಿನಲ್ಲಿ (1972ರಲ್ಲಿ) ಜನಿಸಿದರು. 18 ವರ್ಷದವರಿದ್ದಾಗ ಬರೆದ ‘ಕರುಪ್ಪ ಮತ್ತು ಕಡಲಮ್ಮ‘ ಕತೆಯು ತರಂಗದಲ್ಲಿ ಪ್ರಕಟವಾಗಿ ಸಂಚಲನ ಸೃಷ್ಟಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಸಂಪಾದಿಸಿದ ‘ಕಾಸರಗೋಡಿನ ಸಣ್ಣ ಕತೆಗಳು’ ಪ್ರಾತಿನಿಧಿಕ ಸಂಕಲನದಲ್ಲಿ ಈ ಕತೆಯು ಸೇರ್ಪಡೆಯಾಗಿದೆ. ‘ಮಗ್ಗ’ ಕಥಾ ಸಂಕಲನ 2020ರಲ್ಲಿ ಪ್ರಕಟಣೆ ಕಂಡಿದೆ. ...

READ MORE

Related Books