‘ಬಾರಯ್ಯ ಬೆಳದಿಂಗಳೇ’ ಲೇಖಕ, ಚಿಂತಕ ಸರ್ಜಾಶಂಕರ್ ಹರಳಿಮಠ ಅವರ ಕಥಾಸಂಕಲನ. ‘ಇತ್ತ ಪೇಟೆಯೂ ಅಲ್ಲದ, ಅತ್ತ ಹಳ್ಳಿಯಾಗಿಯೂ ಉಳಿದಿರದ ಮಲೆನಾಡಿನ ಊರುಗಳ ಜೀವನ ವೃತ್ತಾಂತವೇ ಇಲ್ಲಿ ಕಥೆಗಳಾಗಿಯೂ ಮೈ ತಳೆದಿವೆ. ಕನ್ನಡದ ಜನಪ್ರಿಯ ಸಂಸ್ಕೃತಿ ಕಟ್ಟಿ ಕೊಡುವ ಮಲೆನಾಡು ಕುರಿತ ರೆಡಿಮೇಡ್ ನಿರೂಪಣೆಗಳನ್ನು ಈ ಕಥೆಗಳು ಅಲ್ಲಗಳೆಯುತ್ತವೆ. ಮುಗ್ಧ, ಪ್ರಶಾಂತ ಎಂದು ಮುಂತಾಗಿ ಚಿತ್ರಿಸಲ್ಪಡುತ್ತಿರುವ ಮಲೆನಾಡಿನ ಪರಿಸರದಲ್ಲಿ ಆಗುತ್ತಿರುವ ಪಲ್ಲಟಗಳು, ಜನರ ಸುಖದ ಕಲ್ಪನೆಗಳೇ ಬದಲಾಗುತ್ತಿರುವ ಪರಿ, ಹಳ್ಳಿಗಳಿಗೂ ಕಾಲಿಟ್ಟಿರುವ ಮತೀಯ ದ್ವೇಷ ಮತ್ತು ಇದೆಲ್ಲದರಿಂದ ನ್ಯಾಯ, ಅನ್ಯಾಯ, ಪಾಪ ಪುಣ್ಯಗಳ ಕುರಿತ ಪರಂಪರಾಗತ ತಿಳುವಳಿಕೆಯೇ ತಲೆಕೆಳಗಾಗಿರುವುದು - ಈ ವಿಘಟನೆಯನ್ನು ಕಥೆಗಾರ, ಸಶಕ್ತ ವಿವರಗಳು, ಘಟನೆಗಳು ಮತ್ತು ಪಾತ್ರಗಳ ಮುಖಾಂತರ ನಮಗೆ ಕಾಣಿಸುತ್ತಾರೆ’ ಎನ್ನುತ್ತಾರೆ ಹಿರಿಯ ಲೇಖಕ ಜಿ. ರಾಜಶೇಖರ.
ಈ ಕಥೆಗಳಲ್ಲಿ ನಾವು ಸಂಧಿಸುವ ಪಾತ್ರಗಳು ಬದುಕನ್ನು ಕಟ್ಟಲೆಂದೇ ಮುರಿಯುತ್ತಿವೆಯೇನೋ ಅನ್ನಿಸುತ್ತದೆ. ಉದಾ: ಬೇಟ, ಧರಣಿ ಮಂಡಲ ಮಧ್ಯದೊಳಗೆ, ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಸಾವಿತ್ತು ಮಕ್ಕು. ಸರ್ಜಾಶಂಕರ ಅವರ ಭಾಷೆಗೆ ಕಾವ್ಯದ ಲಯವಿದೆ; ಅದು ಮೋಹಕ ಮಾತುಗಾರಿಕೆಯ ಹುಸಿ ಲಯವಲ್ಲ. ಸಾಂದ್ರ ವಿವರಗಳು ಮತ್ತು ಭಾವಪೂರ್ಣ ಘಟನೆಗಳ ಕಥನಕ್ರಮದಲ್ಲೇ ಅಂತರ್ಗತವಾಗಿರುವ ಲಯ ಅದು. ಉದಾ: ಸಾವಿತ್ತು ಮತ್ತು. ಪ್ರಸ್ತುತ ಸಂಕಲನದ ಇನ್ನೊಂದು ಸಫಲ ಪ್ರಯತ್ನ- ಕುವೆಂಪುಗೆ ಸಿಗದ ಕಥೆ. ಆ ಮಹಾಕವಿಯ ಜೀವನದ ದರ್ಶನವನ್ನು ತನ್ನದಾಗಿಸಿಕೊಂಡೇ ಅವರ ಕಣ್ಣು ತಪ್ಪಿಸಿರಬಹುದಾದ ಬದುಕಿನ ಹೆಣಿಗೆಯ ಸೂಕ್ಷ್ಮ ಎಳೆಗಳ ಹುಡುಕಾಟವಾಗಿದೆ.
ಲೇಖಕ, ಚಿಂತಕ, ಡಾ. ಸರ್ಜಾಶಂಕರ್ ಹರಳಿಮಠ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಉದ್ಯೋಗವರಸಿ ಬೆಂಗಳೂರಿಗೆ ತೆರಳಿದರು. ಅಲ್ಲಿ ಬಹುರಾಷ್ಟ್ರೀಯ ಕಂಪನಿ ಸೇರಿದಂತೆ ಕೆಲವು ಕಂಪನಿಗಳಲ್ಲಿ ಒಂದು ದಶಕದ ಕಾಲ ಸೇವೆ ಸಲ್ಲಿಸಿದ ನಂತರ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿ ಶಿವಮೊಗ್ಗದಲ್ಲಿ ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಕೈಮಗ್ಗದ ಉಡುಪುಗಳೂ ಸೇರಿದಂತೆ ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ‘ದೇಸಿ ಸಂಸ್ಖೃತಿ’ ಎಂಬ ಮಾರುಕಟ್ಟೆ ಕೇಂದ್ರವನ್ನು ಆರಂಭಿಸಿದರು. ಜತೆ ಜತೆಗೆ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಲೇ ಕುವೆಂಪು ...
READ MOREಕತೆ ಕೇಳೋಣ ಬನ್ನಿ ಸರಣಿಯಲ್ಲಿ ಸರ್ಜಾಶಂಕರ ಹರಳಿಮಠ ಅವರಿಂದ ‘ಬಾರಯ್ಯ ಬೆಳದಿಂಗಳೇ’ ಕತಾವಾಚನ