ಪ್ರಮುಖ ಕತೆಗಾರರಲ್ಲಿ ಒಬ್ಬರಾದ ವಿವೇಕ ಶ್ಯಾನಭಾಗ ಅವರ ಆಯ್ದಕತೆಗಳ ಸಂಕಲನ. ವಿವೇಕ್ ಅವರು ಐದು ಕತಾ ಸಂಕಲನ ಪ್ರಕಟಿಸಿದ್ದಾರೆ. ಅಂಕುರ, ಲಂಗರು, ಹುಲಿ ಸವಾರಿ, ಮತ್ತೊಬ್ಬನ ಸಂಸಾರ, ಘಾಚರ್ ಘೋಚರ್. ವಿವೇಕ್ ಅವರ ನಾಲ್ಕು ಸಂಕಲನಗಳಿಂದ ಆಯ್ದ ಕತೆಗಳನ್ನು ಈ ಸಂಕಲನ ಒಳಗೊಂಡಿದೆ.
ವಿವೇಕ ಶಾನಭಾಗ ಅವರು ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ವಿವೇಕ ಅವರು 'ದೇಶಕಾಲ' ಎಂಬ ಸಾಹಿತ್ಯಕ ಪತ್ರಿಕೆಯನ್ನೂ ಏಳು ವರ್ಷ ಕಾಲ ನಡೆಸಿದರು. ಹೊಸ ಬಗೆಯ ಕಥೆ ಕಟ್ಟುವ ಅವರು ಸಣ್ಣ ಊರು ಅಥವಾ ವಿಶಾಲ ಜಗತ್ತುಗಳೆರಡರಲ್ಲಿಯೂ ಮನುಷ್ಯರ ಮನಸ್ಸಿನ ಆಯಾಮ ಗುರುತಿಸಬಲ್ಲರು. ಅವರ ’ಘಾಚರ್ ಘೋಚರ್ ನೀಳ್ಗತೆಯ ಇಂಗ್ಲಿಷ್ ಅನುವಾದ ಜಗತ್ತಿನ ಸಾಹಿತ್ಯ ವಲಯದ ಗಮನ ಸೆಳೆದಿದೆ. ಲಂಡನ್, ಅಮೆರಿಕಗಳಲ್ಲಿ ಪ್ರತ್ಯೇಕ ಆವೃತ್ತಿ ಕಂಡಿರುವ ಈ ಕೃತಿ ಜಗತ್ತಿನ 18 ಭಾಷೆಗಳಿಗೆ ಅನುವಾದಗೊಂಡು ಮಚ್ಚುಗೆ ಗಳಿಸಿದೆ. ಅಂಕುರ, ಲಂಗರು, ಹುಲಿಸವಾರಿ, ಮತ್ತೊಬ್ಬನ ...
READ MORE