‘ಭಾರತವನದ ಅರಳೀಮರ’ ಕಿಶೋರ ಸಾಹಿತಿ ಅಂತಃಕರಣ ಅವರ ಕಥಾ ಸಂಕಲನ. ಇಲ್ಲಿಯ ಕತೆಗಳು ಮಾಮೂಲು ಕಥೆಗಳಲ್ಲ ಪಂಚತಂತ್ರದ ಕಥೆಗಳಂತೆಯೂ ಅಲ್ಲ ಇಲ್ಲಿಯ ಕತೆಗಳಿಗೆ ಆಧುನಿಕ ಚಿಂತನೆಯ ಸ್ಪರ್ಶವಿದೆ. ಈ ಕಥೆಗಳು ಒಬ್ಬ ಎಳೆಯ ಬಾಲಕ ರಚಿಸಿರಬಹುದೇ ಎಂದು ಅನುಮಾನ ಮೂಡುವಷ್ಟು ಸಂಕೀರ್ಣತೆ ಮತ್ತು ಸೂಕ್ಷ್ಮ ವಿವರಗಳೊಂದಿಗೆ ಮೂಡಿಬಂದಿವೆ ಎನ್ನುತ್ತಾರೆ ಲೇಖಕ ಶ್ರೀನಿವಾಸ ಕಾರ್ಕಳ.
ಕತೆಗಾರ ಎಷ್ಟು ಜಾಣತನದಿಂದ ಮತ್ತು ಎಚ್ಚರದಿಂದ ಕಥೆ ಹೆಣೆದಿದ್ದಾನೆಂದರೆ ಕಥೆಯೊಂದರಲ್ಲಿ ನಾವು ಸ್ವತಃ ಫುಟ್ ಬಾಲ್ ಮೈದಾನದಲ್ಲಿ ಕುಳಿತು ಆಟವನ್ನು ಆನಂದಿಸಿದ ಅನುಭವವನ್ನು ನೀಡುವಷ್ಟು ಕಸುಬುದಾರಿಕೆಯಿಂದ ಸನ್ನಿವೇಶಗಳನ್ನು ಚಿತ್ರಿಸಲಾಗಿದೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE