ʼಬಾಳ್ನೋಟಗಳುʼ ಸಣ್ಣ ಕಥಾ ಸಂಕಲನವಾಗಿದ್ದು ಲೇಖಕ ಹಾ. ಮಾ. ನಾಯಕ ಅವರು ರಚಿಸಿದ್ದಾರೆ. ಜೀವನದ ಸತ್ಯಸಂಗತಿಗಳನ್ನು ಇಲ್ಲಿ ಹೆಚ್ಚಾಗಿ ಚಿತ್ರೀಕರಿಸಲಾಗಿದೆ. ನುಡಿಯ ಬೆಡಗು, ಕಾದಂಬರಿಯ ಕಲ್ಪನೆಗಳಿಂದ ಇಲ್ಲಿನ ಕಥೆಗಳು ಸಾಗುತ್ತದೆ. ಮಾಯಕ್ಕೆ ಮರುಳಾಗಿ ಜನ ತಮ್ಮ ಪ್ರಾಮಾಣಿಕತೆಯನ್ನು ಕಳೆದುಕೊಂಡು ಹೇಗೆ ಪೆಚ್ಚು ಬೀಳುವರು ಎಂಬ ಸಾರಂಶದೊಂದಿಗೆ ಇಲ್ಲಿನ ಕಥೇಗಳು ಸಾಗುತ್ತದೆ. ಸಹಜವಾದ ರೀತಿಯಲ್ಲಿ ರಮ್ಯವಾಗಿ ಇಲ್ಲಿನ ಕತೆಗಳು ಸಾಗುತ್ತದೆ. ಪ್ರಕೃತಿ ಪ್ರೇರಕವಾದ ಇಲ್ಲಿನ ಕತೆಗಳು ವಿಶೇಷವಾಗಿದೆ.
ತಮ್ಮ ಅಂಕಣ ಬರಹಗಳಿಂದ ಪ್ರಸಿದ್ಧರಾಗಿದ್ದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಸಾಹಿತ್ಯ- ಸಾಂಸ್ಕೃತಿಕ ಲೋಕದ ದೊಡ್ಡ ಹೆಸರಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ 1931ರ ಸೆಪ್ಟೆಂಬರ್ 12ರಂದು ಜನಿಸಿದರು. ತಂದೆ ಶ್ರೀನಿವಾಸನಾಯಕ, ತಾಯಿ ರುಕ್ಮಿಣಿಯಮ್ಮ. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ ಭಾಷಾವಿಜ್ಞಾನದಲ್ಲಿ ಎಂ.ಎ. (1958)ಪದವಿಯನ್ನು ಪಡೆದರು. ತುಮಕೂರಿನಲ್ಲಿ ಕನ್ನಡ ಅಧ್ಯಾಪಕ (1955) ಆಗುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದ ಅವರು ಅನಂತರ ಪ್ರವಾಚಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುಲಪತಿ (1984) ...
READ MORE