ಸಾಹಿತಿ ವಿದ್ಯಾಧರ ಮುತಾಲಿಕ ದೇಸಾಯಿ ಅವರು ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಕೊಡಗನ ಕೋಳಿ ನುಂಗಿತ್ತಾ, ಸಂಕ್ರಮಣ, ಹೊಸಗಣ್ಣಿನ ಒಳನೋಟ, ದೊಳಗಿಂದ, ಚಕ್ರ, ಸಂಜೀವಿನಿ, ನಕ್ಷತ್ರಗಳು, ತೇರನ್ನೇರಿದ ಚೆನ್ನಿ, ದಾಸಾಮೃತವಾಣಿ ಒಳನೋಟ, ಉಡಿಯ ತುಂಬುವೆ, ದಾರ್ಶನಿಕ, ಮಹಾತಾಯಿ, ಹೊಳೆವ ಮುತ್ತಿನ ಹನಿಗಳು, ಮಹಾತಾಯಿ, ನುಡಿಸಿರಿ, ವೈವಿಧ್ಯ, ಹಿಮ್ಮುಖ ಹರಿದ ನದಿ ಸೇರಿ ಹಲವಾರು ಕೃತಿಗಳೂ ರಚಿಸಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು, ಗೊರೂರು ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ ಸೇರಿದಂತೆ ಸಂದಿವೆ.