‘ಅಗಮ್ಯ’ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಸಮಗ್ರ ಕತಾ ಸಂಕಲನ. ಇಲ್ಲಿ ಹದಿನಾಲ್ಕು ಕತೆಗಳು ಸಂಕಲನಗೊಂಡಿವೆ. ಕತೆ-ಕಟ್ಟುವ - ಹೇಳುವ ಕ್ರಮ ಪ್ರಿಯವಾಗಿದ್ದು, ಅವುಗಳ ಲೋಕ ಒಂದಕ್ಕಿಂತ ಮತ್ತೊಂದು ಭಿನ್ನ, ಅಗಾಧ. ಕವಿತೆಯ ಆರ್ದ್ರತೆ-ಭಾವುಕತೆಗಳು ಈ ಕತೆಗಳ ಸಾರ-ಸತ್ವವನ್ನು ಹೆಚ್ಚಿಸಿವೆ. ಓದುಗನ ಭಾವಕೋಶ ಮಿಡಿಯುವಂತೆ ಮಾಡುವ ಸಂಗತಿಗಳನ್ನು ತಮ್ಮ ಒಡಲಿನಲ್ಲಿ ಇಟ್ಟುಕೊಂಡಿವೆ. ಇವು ತಮ್ಮ ವಿಶಿಷ್ಟ ಕಥನ ಕಲೆ-ಶೈಲಿ, ಬದುಕನ್ನು ನೋಡುವ-ದಾಖಲಿಸುವ ಕ್ರಮ, ನಾಟಕೀಯ ನಿರೂಪಣೆ ಹಾಗೂ ಕಾವ್ಯಾತ್ಮಕ ಭಾಷೆಯಿಂದ ಗಮನ ಸೆಳೆಯುತ್ತವೆ. ಬಹುತೇಕ ಕತೆಗಳು ಅನುಭವಗಳು ಪಾತ್ರಗಳಾಗಿ ಎದುರು ಕೂತು ಬರೆಸಿಕೊಂಡ ಹಾಗಿವೆ. ಗ್ರಾಮೀಣ ಬದುಕು, ಬಾಲ್ಯದ ಬೆರಗು, ಹರೆಯದ ಕುತೂಹಲ, ಪ್ರೀತಿ-ಪ್ರೇಮ-ಪ್ರಣಯಗಳನ್ನು ಒಳಗೊಂಡ ಇಲ್ಲಿಯ ಕತೆಗಳಲ್ಲಿ ಕತೆಗಾರನ ನೆನಪು-ಅನುಭವ ಅಕ್ಷರಕ್ಕಿಳಿದು ಬರುತ್ತವೆ. ಕತೆಗಳ ಸ್ವರೂಪ , ಪಡೆದುಕೊಳ್ಳುವ ತಿರುವುಗಳು, ಭಾವನಾತ್ಮಕ ಪ್ರತಿಕ್ರಿಯೆಗಳು ಬದುಕನ್ನು ಗ್ರಹಿಸುವ-ಗ್ರಹಿಸಿದ ವಿವಿಧ ಮಾದರಿಗಳನ್ನು ಕಟ್ಟಿಕೊಡುತ್ತದೆ. ಜೊತೆಗೆ ಸಂಬಂಧದ ಸ್ವರೂಪದ ಶೋಧ ಹುಡುಕುತ್ತವೆ.
ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...
READ MORE