ಸಾಹಿತಿ ನಿರಂಜನ ಅವರು 50 ವರ್ಷಗಳ ಅವಧಿಯಲ್ಲಿ ಬರೆದ (1937-1987) ಸಾಹಿತ್ಯದ ಪ್ರಕಟಣೆಗಾಗಿ ಐಬಿಎಚ್ ಪ್ರಕಾಶನವು ಆರಂಭಿಸಿದ ‘ನಿರಂಜನ ಮೂವತ್ತು ಸಂಪುಟಗಳಲ್ಲಿ’ ಯೋಜನೆಯ ಧ್ವನಿ-1ರ ಕೃತಿಯಾಗಿದೆ. ಇದೇ ರೀತಿ ಧ್ವನಿ -2 ಸಹ ಪ್ರಕಟಿಸಲು ಉದ್ದೇಶಿಸಿದೆ. ಸಮಗ್ರ ಕಥಾ ಸಮನ್ವಯದ ಧ್ವನಿ -1 ರಲ್ಲಿ 87 ಕಥೆಗಳಿವೆ. ಇಲ್ಲಿಯ ಬಹುತೇಕ ಕಥೆಗಳು ಕಡಂಗೊಡ್ಲು ಶಂಕರಭಟ್ಟರು ಸಂಪಾದಕರಾಗಿದ್ದ ರಾಷ್ಟ್ರಬಂಧು ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಬಹುತೇಕ ಕತೆಗಳು ಕಳೆದು ಹೋಗಿದ್ದು ಅವುಗಳನ್ನು ಪುನಃ ಪುಸ್ತಕ ರೂಪದಲ್ಲಿ ಸಾಧ್ಯವಾಗಿಸಿದ್ದಕ್ಕೆ ಸಹಕರಿಸಿದ ಪುತ್ರಿ ಸೀಮಂತಿನಿಯೂ ಸಹ ಕೃತಿ ರಚನೆಕಾರರ ಪೈಕಿ ಎರಡನೆಯವರು.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE