ಕಥೆಗಾರ ಎ.ಎಸ್. ಮಕಾನದಾರ ಅವರು ಸಂಪಾದಿತ ಕಥಾ ಸಂಕಲನ-ಬೊಗಸೆ ತುಂಬಾ ಬಯಲು. ಹಿರಿಯ ಕತೆಗಾರರಾದ ಡಾ. ನಾ. ಡಿಸೋಜ, ಡಾ. ಫಕೀರ ಮುಹಮ್ಮದ್ ಕಟ್ಪಾಡಿ, ವೈದೇಹಿ, ಮೊಗಳ್ಳಿ ಗಣೇಶ್, ಮನು ಬಳಿಗಾರ್. ಪ್ರಹ್ಲಾದ್ ಅಗಸನ ಕಟ್ಟೆ ಡಾ. ಸಬಿಹಾ ಭೂಮಿ ಗೌಡ. ಪ್ರೂ.ಅಬ್ಬಾಸ್ ಮೇಲಿನ ಮನಿ. ಸುನಂದಾ ಕಡಮೆ, ಬಸವರಾಜ್ ಡೋ ಣೂರು, ಕಲಿಗಣನಾಥ್ ಗುಡದೂರ, ಡಾ. ವಿನಯ, ಲೋಕೇಶ್ ಅಗಸನ ಕಟ್ಟೆ. ಅದೀಬ ಅಕ್ತರ್,ಡಾ. ಬಸವ ರಾಜ್ ಸಾದರ ಸರ್ಜಾ ಶಂಕರ ಹರಳಿ ಮಠ, ಆನಂದ್ ಋಗ್ವೇದಿ ಬಾನು ಮುಸ್ತಾಕ್. ರಾಜಶೇಖರ್ ಹತಗುಂದಿ. ಕಂನಾಡಿಗ ನಾರಾಯಣ, ಹಂಝ ಮಲಾರ್, ಮುಂತಾದ 37ಜನ ಕಥೆಗಾರರ ಕತೆ ಗಳಿವೆ. ಹತ್ತಾರು ಬದುಕುಗಳ ಉಗ್ರಾಣ. ಒಂದೊಂದು ಕತೆಯೂ ಒಂದೊಂದು ಲೋಕ. ಜ್ಯಾತ್ಯತೀತತೆ. ಮತಾತೀತತೆ, ನೆರೆ, ರೋಗ, ಹಸಿವು, ಅಸಹಾಯಕತೆ. ಬಡತನ, ಸ್ವಾಭಿಮಾನ, ಎಲ್ಲವೂ ಒಟ್ಟಿಗೆ ಅವಿರ್ಭವಿಸಿ ಅನೇಕರ ಜೀವನ ವನ್ನೂ ಕಟ್ಟಿ ಕೊಡುತ್ತವೆ. ಇಲ್ಲಿನ ಕತೆಗಳನ್ನು ಓದಿ ವಿಷಾದಗೊಂಡೆ, ನಕ್ಕೆ, ಅತ್ತೆ. ಖಿನ್ನಗೊಂಡೆ, ಕಾರಣ ಅಂತಹ ನೂರಾರು ಸನ್ನಿವೇಶಗಳನ್ನು ಇಲ್ಲಿ ಕತೆಗಾರರು ಕಟ್ಟಿ ಕೊಟ್ಟಿದ್ದಾರೆ. ಪ್ರಯೋಗಶೀಲತೆಯ ಅನೇಕ ಮಾದರಿ ಗಳನ್ನೂ ಇಲ್ಲಿ ಕಾಣಬಹುದು ಬೊಗಸೆಯೇ ಬಯಲು ಬಯಲೇ ಬೊಗಸೆ. ಇಲ್ಲಿನ ಕತೆಗಳು ಬಯಲನ್ನು ಬೊಗಸೆ ಯಲ್ಲಿ ಹಿಡಿದಿವೆ. ಆದರಿಂದ ಇವು ಇನಿತರೊಳ ಅನಂತವನ್ನು ಕಾಣಿಸುವ ಶಕ್ತಿಯುಳ್ಳವು ಅಂತಾ ಮುನ್ನುಡಿ ಯಲ್ಲಿ ಡಾ. ರಾಜಪ್ಪ ದಳವಾಯಿ ಅವರು ಅಭಿಪ್ರಾಯ ಪಟ್ಟಿದ್ದಾರೆ. ಮುಚ್ಚಿರುವ ಮನದ ಕದವ ಈ ಕತೆಗಳು ಮಾನವೀಯತೆ ಯಿಂದ ತಟ್ಟುತ್ತವೆ ಎಂದು ಹಿರಿಯ ಕತೆಗಾರ ಮೊಗಳ್ಳಿ ಗಣೇಶ್ ಅಭಿಪ್ರಾಯ ಪಟ್ಟಿದ್ದಾರೆ
ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ. ಪ್ರಶಸ್ತಿ-ಗೌರವಗಳು: ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...
READ MORE