ನಿವಾಳಿಸಿ ಬಿಟ್ಟ ಕೋಳಿ

Author : ಅನಿತಾ ಪಿ. ತಾಕೊಡೆ

Pages 216

₹ 220.00




Year of Publication: 2022
Published by: ಸ್ನೇಹಾ ಎಂಟರ್ ಪ್ರೈಸಸ್
Address: #138, 2ನೇ ಮಹಡಿ, 7 ನೇ ’ ಸಿ’ ಮುಖ್ಯ ರಸ್ತೆ ಹಂಪಿನಗರ, ಬೆಂಗಳೂರು-560104
Phone: 9448870461

Synopsys

‘ನಿವಾಳಿಸಿ ಬಿಟ್ಟ ಕೋಳಿ’ ಅನಿತಾ ಪಿ. ತಾಕೊಡೆ ಅವರ ಕತಾಸಂಕಲನವಾಗಿದೆ. ಈ ಸಂಕಲನದಲ್ಲಿ ಹೆಣ್ಣಿನ ಸಂತ್ರಸ್ತ ಮನೋಲೋಕವನ್ನು ಪುರುಷರ ಚಂಚಲ ಅಸ್ಥಿರ ಬುದ್ಧಿಗೆ ಮುಖಾಮುಖಿಯಾಗಿ ಚಿತ್ರಿಸುವ ಭಾವಲೋಕಗಳು ಅತ್ಯಂತ ಪರಿಣಾಮಕಾರಿಯಾಗಿ ಮೂಡಿವೆ. ಬಾಳನೌಕೆ ಕತೆಯಲ್ಲಿ ಲಂಪಟ ಗಂಡನೊಂದಿಗೆ ನರಕಸದೃಶ ಬದುಕನ್ನು ಸಾಗಿಸುವ ಅಮಾಯಕ ಹೆಣ್ಣಿನ ಅಸಹಾಯಕ ಸ್ಥಿತಿಯು ಹೃದಯಮಿಡಿಯುವ ಶೈಲಿಯಲ್ಲಿ ನಿರೂಪಿಸಲಾಗಿದೆ. ಭ್ರಮೆಯ ತೆರೆ ಸರಿದಾಗ ಈ ಕಥೆಯು ವಿಷಮ ದಾಂಪತ್ಯದ ಕಥೆಯನ್ನು ಹೇಳುತ್ತದೆ‌. ಇಲ್ಲಿ ಹೆಂಡತಿಯೆ ಖಳನಾಯಕಿ‌. ಪ್ರಮಿಳಾ ಎಂಬ ಹೆಣ್ಣು ನಜೀರ್ ಎಂಬ ಸುಂದರ ಶ್ರೀಮಂತ ಯುವಕನನ್ನು ಮದುವೆಯಾಗಿ ಅವನನ್ನು ಮನೆ ಕೂಲಿಯಾಳನ್ನಾಗಿ ನಡೆಸಿಕೊಂಡ ಭೀಕರ ಕತೆ ಇದೆ‌.

About the Author

ಅನಿತಾ ಪಿ. ತಾಕೊಡೆ

ಅನಿತಾ ಪಿ. ತಾಕೊಡೆ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ತಾಕೊಡೆಯವರು. ಪ್ರಸ್ತುತ ಮುಂಬಯಿ ನಿವಾಸಿ. ಇವರು ಕವಿಯಾಗಿ, ಕಥೆಗಾರರಾಗಿ, ಅಂಕಣಕಾರರಾಗಿ  ಹೆಸರು ಮಾಡಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್‍ನೊಂದಿಗೆ  ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕದ ಅರ್ಹತೆಯನ್ನು ಸಾಧಿಸಿದ್ದಾರೆ. ಇವರು 2019ರಲ್ಲಿ  ಮೈಸೂರು ಅರಮನೆಯ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಇವರ ಎಂಟು ಕೃತಿಗಳು ಲೋಕಾರ್ಪಣೆಗೊಂಡಿವೆ. ಪಿಎಚ್.ಡಿ ಕೋರ್ಸ್‍ವರ್ಕ್‍ನ ಸಲುವಾಗಿ ಜಯ ಸಿ. ಸುವರ್ಣರ ಕುರಿತು ಸಿದ್ಧಪಡಿಸಿದ ‘ಸುವರ್ಣಯುಗ’ ಶೋಧ ಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದ ವತಿಯಿದ ಸಂಶೋಧಕಿ ಡಾ.ಲೀಲಾ ಬಿ. ಅವರು ಕೊಡಮಾಡುವ ...

READ MORE

Related Books