ಮಂಜುನಾಥ್ ಲತಾ ಅವರ ಇಲ್ಲಿಯ ಕತೆಗಳು ಪರಂಪರೆಯ ಜತೆ ಅನುಸಂಧಾನ ಮಾಡುವ ತನ್ಮಯತೆ ಮತ್ತು ಎಚ್ಚರ ಎರಡೂ ಗುಣಗಳನ್ನು ಹೊಂದಿದೆ. 'ಒಳಗಲ ಜೋತಿಯು', 'ಹಸಿರು ಗಾಜಿನ ಬಳೆ' ಇವು ಧ್ಯಾನಿಸಿದಂತಹ ಕತೆಗಳು. ಕತೆಗಳ ಮುಖ್ಯ ಆಸಕ್ತಿ ಮನುಷ್ಯಲೋಕದ ವ್ಯವಹಾರಗಳತ್ತ ಜೀವನ ಸೌಂದರ್ಯ ಹಾಗೂ ಕುರೂಪ, ಕೌರ್ಯ ಹಾಗೂ ಮಾನವೀಯತೆಗಳಂತಹ ವೈರುಧ್ಯಗಳನ್ನು ಮುಖಾಮುಖಿಯಾಗಿಸುತ್ತವೆ.
’ಮಂಜುನಾಥ ಲತಾ' ಎಂದು ಬರೆಯುವ ಮಂಜುನಾಥ್ ಎಸ್ ಅವರು ಪತ್ರಿಕೋದ್ಯಮ, ಅಭಿವೃದ್ದಿಪರ ಚಟುವಟಿಕೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಣ್ಣ ಕಥೆಗಳು ಓದುಗರ ಪ್ರೀತಿಗೆ ಪಾತ್ರವಾಗಿವೆ. ತೆಂಕಲಕೇರಿ, ಕತೆ ಎಂಬ ಇರಿವ ಅಲಗು (ಕಥಾ ಸಂಕಲನಗಳು), ಪರದೇಸಿ ಮಗನ ಪದವು, ಆಹಾ ಅನಿಮಿಷ ಕಾಲ, ಸೋಜಿಗದ ಸೂಜಿ (ಕವನ ಸಂಕಲನಗಳು), ಪಲ್ಲಂಗ (ಕಾದಂಬರಿ), ಮಾತಿನ ಓದು (ಲೇಖನಗಳ ಸಂಗ್ರಹ) ಅವರ ಪ್ರಕಟಿತ ಕೃತಿಗಳು. . ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕುಬಾರಿ ಬಹುಮಾನ ಗಳಿಸಿವೆ. ...
READ MORE